ಜಿಲ್ಲಾ ಸುದ್ದಿರಾಮನಗರ

ರಾಮನಗರ: ಉರುಳಿಗೆ ಸಿಲುಕಿ ಹೆಣ್ಣು ಚಿರತೆ ಸಾವು

ರಾಮನಗರ: ಮೊಲ ಹಿಡಿಯಲು ಹಾಕಿದ್ದ ಉರುಳಿಗೆ ಸಿಲುಕಿ ಹೆಣ್ಣು ಚಿರತೆಯೊಂದು ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಅರಳಿಮರ ದೊಡ್ಡಿ ಗ್ರಾಮದಲ್ಲಿ ನಡೆದಿದೆ. ನರಸಿಂಹಯ್ಯ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಚಿರತೆ ಮೃತಪಟ್ಟಿದೆ.

ಜಮೀನು ಮಾಲೀಕರಿಗೆ ಗೊತ್ತಿಲ್ಲದೆ ಮೊಲ ಹಿಡಿಯಲು ಸ್ಥಳೀಯರು ಉರುಳು ಬಿಟ್ಟಿದ್ದರು ಎನ್ನಲಾಗಿದೆ. ಈ ಉರುಳಿಗೆ ಸಿಲುಕಿ ಮೂರು ವರ್ಷದ ಹೆಣ್ಣು ಚಿರತೆ ನೆನ್ನೆ ಸಾವನ್ನಪ್ಪಿದೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾ ರಿಗಳು ಭೇಟಿ ನೀಡಿದ್ದು, ಪರೀಶಿಲನೆ ನಡೆಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button