ಜಿಲ್ಲಾ ಸುದ್ದಿರಾಮನಗರ

ಹಳ್ಳಕ್ಕೆ ನುಗ್ಗಿದ ಸರ್ಕಾರಿ ಬಸ್: ಡಕೋಟಾ ಬಸ್ ರಸ್ತೆಗಿಳಿಸಿದಕ್ಕೆ ಪ್ರಯಾಣಿಕರ ಆಕ್ರೋಶ

ರಾಮನಗರ: ಕೆಎಸ್ಆರ್ ಟಿಸಿ ಬಸ್ಸಿನ ಎಕ್ಸಲ್ ಬ್ಲೇಡ್ ಕಟ್ ಆಗಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಹಳ್ಳಕ್ಕೆ ನುಗ್ಗಿದ್ದು, ಅದೃಷ್ಟವಶಾತ್ ಬಸ್ ನಲ್ಲಿ ಇದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಬುಡುಗನದೊಡ್ಡಿ ಗ್ರಾಮದ ಬಳಿ ಘಟನೆ ಜರುಗಿದೆ. ಬೊಮ್ಮನಾಯಕನಹಳ್ಳಿ ಗ್ರಾಮದಿಂದ ಚನ್ನಪಟ್ಟಣಕ್ಕೆ ಬರುತ್ತಿದ್ದ ಬಸ್ ಬಸ್ಸಿನ ಎಕ್ಸಲ್ ಕಟ್ ಆಗಿದೆ. ಬಸ್ ನಲ್ಲಿ ಕಾಲೇಜು ವಿದ್ಯಾರ್ಥಿಗಳು ಸೇರಿ 60ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಇದ್ದರು.

ಅದೃಷ್ಟವಶಾತ್ ಚಾಲಕನ ರಸ್ತೆ ಪಕ್ಕದಲ್ಲಿದ್ದ ಹಳ್ಳಕ್ಕೆ ಬಸ್ ಬಿಟ್ಟು ನಿಲ್ಲಿಸಿದ್ದು, ಯಾವುದೇ ಹೆಚ್ಚಿನ ಪ್ರಮಾಣ ಹಾನಿ ಆಗುವುದನ್ನ ತಪ್ಪಿಸಿದ್ದಾರೆ.

ಹಳೆಯ ಬಸ್ಸುಗಳನ್ನು ಬದಲಾಯಿಸದೆ, ಸುಸ್ಥಿತಿಯಲ್ಲಿಡಲು ಸಾರಿಗೆ ಇಲಾಖೆ ವಿಫಲವಾಗಿರುವುದೇ ಈ ಅಪಘಾತಕ್ಕೆ ಕಾರಣ ಎಂದು ಈ ಭಾಗದ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button