ಕೋಲಾರ

ಕೋಲಾರ: ಕುಡಿಯುವ ನೀರಿನ‌ ಯೋಜನೆ ಕಾಮಗಾರಿ ಪೂರ್ಣ

ಕೋಲಾರ: ಸತತ ಬರಗಾಲಕ್ಕೆ ತುತ್ತಾಗಿರುವ ಕೋಲಾರ ಜಿಲ್ಲೆಯಲ್ಲಿ ಕುಡಿಯುವ ನೀರಿಗೂ ಆಹಾಕಾರ ಪರಿಸ್ಥಿತಿ ಎದುರಾಗಿದೆ… ಮಳೆಗಾಲದಲ್ಲಿ ಬೆಟ್ಟಗಳ ಮೇಲೆ ಬಿದ್ದ ಮಳೆಯ ನೀರನ್ನು ಶೇಖರಿಸಿ ಆ ನೀರನ್ನು ಜಿಲ್ಲೆಯ ಮೂರು ನಗರ ಪ್ರದೇಶಗಳು ಹಾಗು 45 ಹಳ್ಳಿಗಳಿಗೆ ಕುಡಿಯಲು ನೀರೊದಗಿಸುವ ಯೋಜನೆ ಸಿದ್ದವಾಗಿದೆ.

ಬಂಗಾರಪೇಟೆ ತಾಲ್ಲೂಕಿನ ತಮಿಳುನಾಡು ಗಡಿಯಂಚಿನಲ್ಲಿರುವ ಯರಗೋಳ್ ಬೆಟ್ಟಗಳ ಮೇಲೆ ಬಿದ್ದಂತಹ ಬಹುತೇಕ ನೀರು ತಮಿಳುನಾಡಿಗೆ ಹರಿದು ಹೋಗುತ್ತಿತ್ತು… 2008 ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಯರಗೋಳ್ ಬಳಿ ಡ್ಯಾಂ ನಿರ್ಮಿಸಿ ತಮಿಳುನಾಡಿಗೆ ವ್ಯರ್ಥವಾಗಿ ಹರಿದು ಹೋಗುತ್ತಿದ್ದ ನೀರನ್ನು ಶೇಖರಿಸಿ ಅದನ್ನು ಪೈಪ್ ಲೈನ್ ಮೂಲಕ ಬಂಗಾರಪೇಟೆ, ಕೋಲಾರ ಮತ್ತು ಮಾಲೂರು ನಗರ ಪ್ರದೇಶಗಳಿಗೆ ಹಾಗೂಡ್ಯಾಂ ಸುತ್ತ ಮುತ್ತಲಿನ 45 ಹಳ್ಳಿಗಳಿಗೆ ಕುಡಿಯುವ ನೀರಿನ ಯೋಜನೆ ಸಿದ್ದವಾಗಿದೆ.

ಸುಮಾರು 14 ವರ್ಷಗಳ ಬಳಿಕ ಯೋಜನೆ ಪೂರ್ಣಗೊಂಡಿದ್ದು ನೀರು ಹರಿಸಲಾಗುತ್ತಿದೆ… ಸುಮಾರು 324 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಪ್ರಾಜೆಕ್ಟ್ ಇದಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button