ಚಿಕ್ಕಮಗಳೂರು

ಗ್ರಾಮೀಣ ಭಾಗದಲ್ಲಿ ಬಸ್‌ ಸೇವೆ ಪುನರಾರಂಭಕ್ಕೆ ಆಗ್ರಹ

ಚಿಕ್ಕಮಗಳೂರು: ಕೋವಿಡ್‌ ನಿರ್ವಹಣೆ ಕಾರಣದಿಂದ ಗ್ರಾಮಾಂತರ ಪ್ರದೇಶದ ಹಳ್ಳಿಗಳಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ರದ್ದುಪಡಿಸಲಾಗಿತ್ತು. ಇತ್ತೀಚಿನ ದಿನಗಳಿಂದ ಸೋಂಕಿತರ ಸಂಖ್ಯೆ ಕಡಿಮೆಯಾಗಿದೆ. ಜನಸಾಮಾನ್ಯರು ಸರ್ಕಾರದ ನಿಯಮ ಪಾಲಿಸುತ್ತಿದ್ದಾರೆ. ಆದ್ದರಿಂದ ಬಸ್ ಸೇವೆ ಪುನರಾರಂಭಿಸಬೇಕು ಎಂದು ವಿವಿಧ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಗ್ರಾಮಾಂತರ ಭಾಗಗಳಿಗೆ ಬಸ್‌ಗಳಿಲ್ಲದೆ ವಿದ್ಯಾರ್ಥಿಗಳು, ಸಾರ್ವಜನಿಕರು, ರೈತರು, ಕಾರ್ಮಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಕಚೇರಿ ಕೆಲಸಕ್ಕೆ ಹೋಗಲು ಖಾಸಗಿ ವಾಹನಗಳಲ್ಲಿ ಸಂಚರಿಸಲು ದುಬಾರಿ ಹಣ ವ್ಯಯಿಸಬೇಕಾಗಿದೆ. ಬಡವರ್ಗದವರು ಸಂಕಷ್ಟದಲ್ಲಿದ್ದಾರೆ. ಹಳ್ಳಿಗಾಡಿನ ಜನಜೀವನವೇ ಸ್ತಬ್ದವಾಗಿದೆ. ಹೀಗಾಗಿ ಬಸ್‌ ಸೇವೆಯನ್ನು ಪುನರಾರಂಭಿಸಬೇಕು ಎಂದು ವಿವಿಧ ಗ್ರಾಮಸ್ಥರಾದ ಹೊನ್ನಾಮಕ್ಕಿ ರಮೇಶ್‌ ಹೆಗ್ಗಡೆ, ಹೆಸಗೋಡು ಶಿವಶಂಕರ್‌, ವಿಜಯ್ ಕುಮಾರ್, ನಾಗರಾಜ್, ಮಿಥುನ್‌ ಮುಂತಾದವರು ಆಗ್ರಹಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button