ಕಲಬುರ್ಗಿಜಿಲ್ಲಾ ಸುದ್ದಿರಾಜಕೀಯ

MLC Election: ಕಲಬುರಗಿ-ಯಾದಗಿರಿ ವಿಧಾನ ಪರಿಷತ್‌ಗೆ ಚುನಾವಣೆ: ಮಂದಗತಿಯಲ್ಲಿ ಮತದಾನ

ಕಲಬುರಗಿ: ಕಲಬುರಗಿ-ಯಾದಗಿರಿ ವಿಧಾನ ಪರಿಷತ್ ಚುನಾವಣೆ ಮತದಾನ ಪ್ರಕ್ರಿಯೆ ಬೆಳಗ್ಗೆ 8 ರಿಂದ ಆರಂಭಗೊಂಡಿದ್ದು, ಮಂದಗತಿಯಲ್ಲಿ ಮತದಾನ ನಡೆಯುತ್ತಿದೆ.

ಕಲಬುರಗಿ ಮತ್ತು ಯಾದಗಿರಿ ಜಿಲ್ಲೆ ಒಳಗೊಂಡ ಈ ಕ್ಷೇತ್ರದಲ್ಲಿ 3358 ಪುರುಷ, 3744 ಮಹಿಳೆಯರು ಸೇರಿದಂತೆ ಒಟ್ಟು 7102 ಚುನಾಯಿತ ಜನಪ್ರತಿನಿಧಿಗಳು ಮತದಾರರಾಗಿದ್ದು, ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಮತದಾನಕ್ಕಾಗಿ ಕಲಬುರಗಿಯಲ್ಲಿ 265, ಯಾದಗಿರಿಯಲ್ಲಿ 126 ಮತಗಟ್ಟೆ ಸೇರಿದಂತೆ ಒಟ್ಟು 391 ಮತಗಟ್ಟೆ ಸ್ಥಾಪನೆ ಮಾಡಲಾಗಿದೆ.

ಕೊರೊನಾ ಮಾರ್ಗ ಸೂಚಿಗಳ ಅನ್ವಯ ಮತದಾನ ನಡೆದಿದ್ದು‌, ಮತದಾನ ಕೇಂದ್ರದ ಸುತ್ತಲು ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಬೆಳಗ್ಗೆ 8 ರಿಂದ ಮತದಾನ ಆರಂಭಗೊಂಡರೂ ಮತದಾನ ಮಾತ್ರ ಮಂದಗತಿಯಲ್ಲಿ ನಡೆದಿದೆ. ಸಾಯಂಕಾಲ 4 ಗಂಟೆವರೆಗೆ ಮತದಾನಕ್ಕೆ ಸಮಯವಿದ್ದು, ಮಧ್ಯಾನದ ನಂತರ ಮತದಾನ ಚುರುಕುಗೊಳ್ಳುವ ಸಾಧ್ಯತೆ ಇದೆ.

ಅಭ್ಯರ್ಥಿ, ಸಂಸದರ ಮತದಾನ:

ಕಲಬುರಗಿ ತಾಲೂಕು ಪಂಚಾಯತ್ ಕಚೇರಿಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಜಿ.ಪಾಟೀಲ್ ಹಾಗೂ ಸಂಸದ ಉಮೇಶ್ ಜಾಧವ ಮತದಾನ ಮಾಡಿದರು. ಮತದಾನದ ಬಳಿಕ ಮಾತನಾಡಿದ ಪಾಟೀಲ್, ಕಳೆದ ಬಾರಿ 800 ಮತಗಳಿಂದ ಗೆದ್ದಿದ್ದು, ಈ ಬಾರಿ 1600ಕ್ಕಿಂತ ಅಧಿಕ ಮತಗಳಿಂದ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.

ಸಂಸದ ಉಮೇಶ್ ಜಾಧವ ಕೂಡಾ ಬಿ.ಜಿ.ಪಾಟೀಲ್ ಮತ್ತೊಮ್ಮೆ ಗೆಲುವು ಸಾಧಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತ ಪಡಿಸಿದರು. ಇದಕ್ಕೂ ಮುನ್ನ ಬಿ.ಜಿ.ಪಾಟೀಲ್ ಕಲಬುರಗಿ ಐತಿಹಾಸಿಕ ಶ್ರೀ ಶರಣಬಸವೇಶ್ವರ ದೇವಸ್ಥಾನಕ್ಕೆ ತೆರಳಿ, ವಿಶೇಷ ಪೂಜೆ ಸಲ್ಲಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button