ಸಾರಿಗೆ ಬಸ್‌ನಲ್ಲಿ ಲೇಡೀಸ್ ಟಾಯ್ಲೆಟ್

ಕಲಬುರ್ಗಿ: ಹಿಂದುಳಿದ ಪ್ರದೇಶವನ್ನು ಸಮಗ್ರ ಅಭಿವೃದ್ಧಿ ಮಾಡಲೆಂದು ಹೈದ್ರಾಬಾದ್ ಕರ್ನಾಟಕ ಹೆಸರನ್ನು ಬದಲಿಸಿ ರಾಜ್ಯ ಬಿಜೆಪಿ ಸರ್ಕಾರ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದೆ. ಇದೀಗ ಈಶಾನ್ಯ ಕರ್ನಾಟಕ ಸಾರಿಗೆ ನಿಗಮದ ಹೆಸರನ್ನು ಬದಲಿಸಿ ಇಂದಿನಿಂದ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ ಎಂದು ಮರು ನಾಮಕರಣ ಮಾಡಲಾಗಿದೆ. ಹೆಸರು ಬದಲಿಸಿದ ಬೆನ್ನಲ್ಲೇ ಮಹಿಳಾ ಪ್ರಯಾಣಿಕರ ಅನುಕೂಲಕ್ಕಾಗಿ ಸಾರಿಗೆ ಸಂಸ್ಥೆ ಹೊಸ ಹೆಜ್ಜೆ ಇಟ್ಟಿದೆ.


ಮಹಿಳಾ ಪ್ರಯಾಣಿಕರ ಅನುಕೂಲಕ್ಕಾಗಿ ಕೆಕೆಆರ್ ಟಿಸಿ ಮಹತ್ವದ ಹೊಸ ಹೆಜ್ಜೆ ಇಟ್ಟಿದೆ. ಬಸ್ ನಲ್ಲಿ ಪ್ರಮಾಣಿಸಿ ನಿಲ್ದಾಣದಲ್ಲಿ ಬಂದಿಳಿಯುವ ಮಹಿಳಾ ಪ್ರಯಾಣಿಕರು ಶೌಚಾಲಯ, ವಾಷ್ ರೂಂಗಾಗಿ ಸಮಸ್ಯೆ ಅನುಭವಿಸುತ್ತಿದ್ದರು. ಇದನ್ನು ಗಮನದಲ್ಲಿಟ್ಟುಕೊಂಡು ಕೆಕೆಆರ್ ಟಿಸಿ, ನಿರುಪಯುಕ್ತ ಬಸ್ ನ್ನ ಬಳಸಿಕೊಂಡು ಮಹಿಳಾ ಶೌಚಾಲಯ ನಿರ್ಮಿಸಿದೆ. ಸೆಲ್ಕೋ ಸೋಲಾರ್ ಸಿಸ್ಟಮ್ ಸಹಯೋಗದೊಂದಿಗೆ ಸುಮಾರು ೪.೫ ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಈ ಮೊಬೈಲ್ ಬಸ್ ಶೌಚಾಲಯದಲ್ಲಿ ಸುಸಜ್ಜಿತ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಹೈಟೆಕ್ ಮೊಬೈಲ್ ಬಸ್ ಶೌಚಾಲಯದಲ್ಲಿ ಒಂದು ವೆಸ್ಟರ್ನ್, ಒಂದು ಇಂಡಿಯನ್ ಟೈಪ್ ಟಾಯ್ಲೆಟ್, ಒಂದು ಸ್ನಾನಕ್ಕಾಗಿ ಒಂದು ಬಾಥ್ ರೂಂ ಕೂಡ ಇದೆ. ಅಲ್ಲದೆ ಮಕ್ಕಳಿಗೆ ಹಾಲುಣಿಸಲು ಫೀಡಿಂಗ್ ರೂಮ್ ಕೂಡ ಇದೆ. ಹ್ಯಾಂಡ ವಾಶ್ ಮಾಡಲು ವಾಶ್ ಬೇಸೀನ್ ಅಳವಡಿಸಲಾಗಿದೆ. ಇದರ ಜೊತೆಗೆ ಚೇರ್ ಗಳ ವ್ಯವಸ್ಥೆ, ಸೋಲಾರ್ ಸಿಸ್ಟಮ್ ಮೂಲಕ ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ. ಈ ಹೈಟೆಕ್ ಮೊಬೈಲ್ ಮಹಿಳಾ ಶೌಚಾಲಯ ಬಳಸಲು 5 ರೂ. ದರ ನಿಗದಿ ಮಾಡಲಾಗಿದೆ. ಕಲಬುರಗಿಗೆ ಭೇಟಿ ನೀಡಿದ್ದ ಸಾರಿಗೆ ಸಚಿವರು ಈ ಬಸ್ ಶೌಚಾಲಯಕ್ಕೆ ಚಾಲನೆ ನೀಡಿದ್ರು. ಸದ್ಯ ಕಲಬುರಗಿಯ ಕೇಂದ್ರ ಬಸ್ ನಿಲ್ದಾಣದಲ್ಲಿಯೇ ಈ ಮೊಬೈಲ್ ಬಸ್ ಶೌಚಾಲಯ ಸೇವೆಗೆ ಲಭ್ಯವಿದೆ.
ಶೌಚಕ್ಕಾಗಿ ಸಮಸ್ಯೆ ಅನುಭವಿಸುತ್ತಿದ್ದ ಮಹಿಳಾ ಪ್ರಯಾಣಿಕರಿಗೆ ಈ ಮೊಬೈಲ್ ಟಾಯ್ಲೆಟ್ ಸಾಕಷ್ಟು ಅನುಕೂಲ ಆಗಲಿದೆ.




