ಕಲಬುರ್ಗಿ

ಕಲಬುರಗಿಯಲ್ಲಿ ಹೆಚ್ಚಿದ ಹಿಜಾಬ್ ಕಿಚ್ಚು: ಉಪನ್ಯಾಸಕರು, ವಿದ್ಯಾರ್ಥಿಗಳ ಮಧ್ಯೆ ವಾಗ್ವಾದ

ಕಲಬುರಗಿ: ಕುಂದಾಪುರದ ಕಾಲೇಜಿನಲ್ಲಿ ಹತ್ತಿಕೊಂಡಿದ್ದ ಹಿಜಾಬ್ ಕಿಚ್ಚು ಇದೀಗ ಬಿಸಿಲೂರು ಕಲಬುರಗಿಗೂ ವ್ಯಾಪಿಸಿದೆ. ಜಿಲ್ಲೆಯ ಹಲವೆಡೆ ವಿದ್ಯಾರ್ಥಿಗಳು ಕೇಸರಿ ಶಾಲು ಧರಸ ಕಾಲೇಜಿಗೆ ಬರುತ್ತಿದ್ದು ಕಾಲೇಜಿಗಳಲ್ಲಿ ಪರಿಸ್ಥಿತಿ ಹದಗೆಡುತ್ತಿದೆ.

ಜೇವರ್ಗಿ ಪಟ್ಟಣದ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದಿದ್ದಾರೆ. ಪರೀಕ್ಷೆ ಇದ್ದ ಕಾರಣಕ್ಕೆ ಶಾಲ್ ತೆಗೆದು ಬರುವಂತೆ ಉಪನ್ಯಾಸಕರು ಸೂಚಿಸಿದ್ರು ವಿದ್ಯಾರ್ಥಿಗಳು ಕ್ಯಾರೆ ಎನ್ನುತ್ತಿಲ್ಲ. ಹಿಜಾಬ್ ಧರಿಸಿ ಬಂದವರಿಗೆ ಒಳಗೆ ಬಿಟ್ಟಿದ್ದೀರಿ, ನಮಗೂ ಬಿಡಿ ಎಂದು ವಾಗ್ವಾದ ನಡೆಸಿದ್ದಾರೆ.

ಉಪನ್ಯಾಸಕರು ಕೈಯಲ್ಲಿ ಕೋಲು ಹಿಡಿದು ಬರ್ತಿದ್ದಂಗೆ ರೊಚ್ಚಿಗೆದ್ದ ವಿದ್ಯಾರ್ಥಿಗಳು ಉಪನ್ಯಾಸಕರ ಜೊತೆ ಗಲಾಟೆ ಶುರುಮಾಡಿದ್ದಾರೆ.

ಇನ್ನೊಂದಡೆ ಅಫಜಲಪುರ ತಾಲೂಕಿನ‌ ಮಣ್ಣೂರ ಸರ್ಕಾರಿ ಕಾಲೇಜಿನಲ್ಲಿ ನೂರಾರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಕೇಸರಿ ಶಾಲು ಧರಿಸಿ ಜಯಘೋಷ ಹಾಕುತ್ತ ಕಾಲೇಜಿಗೆ ಬಂದಿದ್ದಾರೆ. ವಿದ್ಯಾರ್ಥಿಗಳನ್ನು ಒಳಗಡೆ ಪ್ರವೇಶ ನೀಡದೆ ಸಿಬ್ಬಂದಿಗಳು ಹೊರಗಡೆ ತಡೆದು ನಿಲ್ಲಿಸಿದ್ದಾರೆ. ಜಿಲ್ಲೆಯಲ್ಲಿಯೂ ಪರಸ್ಥೀತಿ ಕೈಮೀರಿ ಹೋಗುತ್ತಿದ್ದು, ಹಿಜಾಬ್ ವಿವಾದ ಕಿಚ್ಚು ಮತ್ತಷ್ಟು ಹೆಚ್ಚಿದೆ.

Spread the love

Related Articles

Leave a Reply

Your email address will not be published. Required fields are marked *

Back to top button