ಕಲಬುರ್ಗಿ

ಕಲಬುರ್ಗಿಯಲ್ಲಿ ವರುಣನ ಆರ್ಭಟ; ಹಳ್ಳದಲ್ಲಿ ಸಿಲುಕಿ ಪರದಾಡಿದ ಕುರಿಗಾಹಿಗಳು

ಕಲಬುರಗಿ: ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿ ವರುಣ ಅಬ್ಬರಿಸುತ್ತಿದ್ದು, ಕೆರೆ ಕಟ್ಟೆಗಳು ತುಂಬಿ ಜನ‌ಸಾಮಾನ್ಯರು ಪರದಾಡುವ ಸ್ಥೀತಿ ನಿರ್ಮಾಣವಾಗಿದೆ. ಕುರಿ ಮೇಯಿಸಲು ತೆರಳಿದಾಗ ಏಕಾಏಕಿ ಹಳ್ಳ ಬಂದು ಕುರಿಗಾಹಿಗಳು ಜೀವ ಉಳಿಸಿಕೊಳ್ಳಲು ಪರದಾಡಿದ ಘಟನೆ ಚಿಂಚೋಳಿ ತಾಲೂಕಿನ ಧರ್ಮಸಾಗರ ತಾಂಡಾದಲ್ಲಿ ನಡೆದಿದೆ.

ತಾಂಡಾದ ಸುತ್ತಮುತ್ತಲಿನ ಹಳ್ಳ ಕೆರೆಗಳು ಮಳೆ ನೀರಿನಿಂದ ತುಂಬಿ ಹರಿಯುತ್ತಿವೆ. ಬೆಳಗ್ಗೆ ಕುರಿ ಮೇಯಿಸಲು ಹೋಗುವಾಗ ಇಲ್ಲದ ಹಳ್ಳ ಬರುವಾಗ ತುಂಬಿ ಹರಿಯುತ್ತಿದ್ದ ಪರಿಣಾಮ ಕುರಿಗಳ ಸಮೇತ ಕುರಿಗಾಯಿಗಳು ಸಿಲುಕಿ ಪರದಾಡಿದ್ದಾರೆ. ಇಬ್ಬರು ಕುರಿಗಾಹಿಗಳು ಹಳ್ಳದಾಟಲಾಗದೆ ನೆರವಿಗಾಗಿ ಯಾಚಿಸಿದ್ದಾರೆ.

ನಂತರ ತಾಂಡಾದ ಜನರು ಸುದ್ದಿ ತಿಳಿದು ಸ್ಥಳಕ್ಕಾಗಮಿಸಿ ಇಬ್ಬರನ್ನು ಹಳ್ಳ ದಾಟಿಸುವಲ್ಲಿ ಸಹಾಯ ಮಾಡಿದ್ದಾರೆ. ಸ್ಥಳಿಯ ಯುವಕರ ಸಹಾಯದಿಂದ ಮೇಕೆಗಳ ಸಮೇತ ಕುರಿಗಾಯಿ ಯಲ್ಲಪ್ಪ ಹಾಗೂ ಇನ್ನೋರ್ವ ಸುರಕ್ಷಿತವಾಗಿ ತಾಂಡಾಕ್ಕೆ ಮರಳಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button