ಕಲಬುರ್ಗಿ

ರೈತರ ಹೆಸರಲ್ಲಿ ಸಾಲ; ಸಹಕಾರ ಸಂಘದ ಕಾರ್ಯದರ್ಶಿಗೆ ಥಳಿತ

ಕಲಬುರಗಿ: ನಕಲಿ ಸಹಿ ಮಾಡಿ ರೈತರ ಹೆಸರಿನಲ್ಲಿ ಸಾಲ ಪಡೆದಿದ್ದಾನೆಂದು ಆರೋಪಿಸಿ ಸಹಕಾರ ಸಂಘದ ಕಾರ್ಯದರ್ಶಿಗೆ ಬಟ್ಟೆ ಬಿಚ್ಚಿ ಥಳಿಸಿರುವ ಘಟನೆ ಜೇವರ್ಗಿಯಲ್ಲಿ ನಡೆದಿದೆ.

ಯಡ್ರಾಮಿ ತಾಲ್ಲೂಕಿನ ಯಲಗೋಡ ಸಹಕಾರ ಸಂಘದ ಕಾರ್ಯದರ್ಶಿ ರಾಯಪ್ಪಗೌಡ ಹಲ್ಲೆಗೆ ಒಳಗಾದವರು. ಜೇವರ್ಗಿ ಪಟ್ಟಣದ ಬಸವೇಶ್ವರ ಸರ್ಕಲ್ ಬಳಿ ರೈತರು ಬಟ್ಟೆ ಬಿಚ್ಚಿ ಥಳಿಸಿದ್ದಾರೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿಯಾಗಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ರಾಯಪ್ಪಗೌಡ, ರೈತರ ನಕಲಿ ಸಹಿ ಮಾಡಿ ಕೊಟ್ಯಂತರ ರೂ. ಲೂಟಿ ಮಾಡಿದ್ದಾರೆ ಅಂತ ರೈತರು ಆರೋಪಿಸಿದ್ದಾರೆ.

ರೈತರ ಹೆಸರಿನ ಮೇಲೆ ನಕಲಿ ಸಹಿ ಮಾಡಿದ್ದರ ಬಗ್ಗೆ ಹಾಗೂ ಸಹಕಾರ ಸಂಘವನ್ನು ದೂರುಪಯೋಗಪಡಿಸಿಕೊಂಡಿದ್ದರ ಬಗ್ಗೆ ಮೇಲಾಧಿಕಾರಿಗಳಿಗೆ ದೂರು ಸಹ ಸಲ್ಲಿಸಲಾಗಿದೆ. ಆದ್ರೆ ಅಧಿಕಾರಿಗಳು ಯಾವುದೆ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ರೈತರು ರೊಚ್ಚಿಗೆದ್ದು ಗೂಸಾ ನೀಡಿದ್ದಾರೆ. ಸ್ಥಳಿಯರು ರಾಯಪ್ಪಗೌಡನ ರಕ್ಷಣೆ ಮಾಡಿದ್ದು, ಅಧಿಕಾರಿಗಳು ತಕ್ಷಣ ಕ್ರಮಕ್ಕೆ‌ ಮುಂದಾಗಬೇಕು. ಉನ್ನತ ಮಟ್ಟದ ತನಿಖೆ ನಡೆಸುವಂತೆ ರೈತರು ಆಗ್ರಹಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button