ಕಲಬುರ್ಗಿ

ಬೆಂಕಿ ಅನಾಹುತ; 20 ಲಕ್ಷ ಮೌಲ್ಯದ ಸಾಮಗ್ರಿಗಳು ಭಸ್ಮ

ಕಲಬುರ್ಗಿ: ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಎರಡು ಅಂಗಡಿಗಳು ಸುಟ್ಟು ಕರಕಲಾದ ಘಟನೆ ಇಲ್ಲಿನ ನೂರಭಾಗ ಬಡಾವಣೆಯಲ್ಲಿ ನಡೆದಿದೆ.

ಅಲ್- ಕರೀಮ್ ಬೈತುಲ್ ಮಾಲ್ ಬೆಂಕಿಗೆ ಆಹುತಿಯಾಗಿದ್ದು, ಅಹ್ನಿಶಾಮಕ ದಳದ ಸಿಬ್ವಂದಿ ಬೆಂಕಿ ನಂದಿಸಿದ್ದಾರೆ‌. ಸುಮಾರು 20 ಲಕ್ಷ ಮೌಲ್ಯದ ಬೆಲೆ ಬಾಳುವ ವಸ್ತು ಬೆಂಕಿಗೆ ಆಹುತಿಯಾಗಿವೆ. 1 ಟಾಟಾ-ಯಸ್ ವಾಹನ, 1ಟಿವಿಎಸ್ ಬೈಕ್, 3 ವಾಸಿಂಗ್ ಮಷಿನ್, 5 ಫ್ರೀಜ್ಡ್, 10 ಟಿವಿ ಸುಟ್ಟು ಕರಕಲಾಗಿವೆ. ಪಕ್ಕದ ಪಡಿತರ ಅಂಗಡಿಗೂ ಬೆಂಕಿ ಕೆನ್ನಾಲಿಗೆ ವ್ಯಾಪಿಸಿದ ಪರಿಣಾಮ ಸಾರ್ವಜನಿಕ ವಿತರಣೆಗೆ ಇಟ್ಟಿದ್ದ ಪಡಿತರ ಆಹಾರ ಧಾನ್ಯ ಸುಟ್ಟು ಭಸ್ಮವಾಗಿವೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರೀಶಿಲನೆ ಮಾಡುತ್ತಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button