ಜಿ.ಪಂ ಕಾಂಗ್ರೆಸ್ ಟಿಕೆಟ್ಗಾಗಿ ರಕ್ತದಿಂದ ಪತ್ರ ಬರೆದ ಯುವಕ

ಕಲಬುರಗಿ: ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಕ್ಷೇತ್ರಗಳ ಮೀಸಲಾತಿ ಪ್ರಕಟವಾದ ಬೆನ್ನಲ್ಲೇ ಹಳ್ಳಿ ರಾಜಕೀಯ ಚಟುವಟಿಕೆ ಗರಿಗೆದರಿವೆ. ಟಿಕೆಟ್ ಪಡೆಯಲು ರಾಜಕೀಯ ನಾಯಕರಿಗೆ ದುಂಬಾಲು ಬಿಳುತ್ತಿದ್ದಾರೆ. ಕಾಂಗ್ರೆಸ್ ಟಿಕೆಟ್ ಗಾಗಿ ಇಲ್ಲೊಬ್ಬ ಕಾರ್ಯಕರ್ತ ತನ್ನ ರಕ್ತದಿಂದ ಪತ್ರ ಬರೆದು ಮನವಿ ಮಾಡಿ ಗಮನ ಸೇಳೆದಿದ್ದಾನೆ.
ಅಫಜಲಪುರ ತಾಲೂಕಿನ ಮಣ್ಣೂರ (ಕರಜಗಿ) ಜಿ.ಪಂ ಕ್ಷೇತ್ರಕ್ಕೆ, ತಾ.ಪಂ ಮಾಜಿ ಉಪಾಧ್ಯಕ್ಷ ಭೀಮಾಶಂಕರ ಹೊನ್ನಕೇರಿ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡುವಂತೆ ಕಾಂಗ್ರೆಸ್ ಕಾರ್ಯಕರ್ತ ಕರಜಗಿ ಗ್ರಾಮದ ಸಿದ್ದು ಖೇಡ ಎಂಬಾತ ಶಾಸಕರಿಗೆ ರಕ್ತದಿಂದ ಪತ್ರ ಬರೆದು ಮನವಿ ಮಾಡಿದ್ದಾನೆ.
ಕಳೆದ ಜಿ.ಪಂ ಚುನಾವಣೆಯಲ್ಲಿ ಟಿಕೆಟ್ ಸಿಗಬೇಕಾಗಿತ್ತು. ಶಾಸಕರು ಬೇರೆ ಅಭ್ಯರ್ಥಿಯನ್ನು ಸೂಚಿಸಿದ ಹಿನ್ನಲೆ ಟಿಕೆಟ್ ಬಿಟ್ಟುಕೊಟ್ಟು ಸೂಚಿತ ಅಭ್ಯರ್ಥಿ ಗೆಲುವಿಗೆ ಹೊನ್ನಕೇರಿ ಶ್ರಮಿಸಿದ್ದಾರೆ. ಈ ಬಾರಿ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಜಿ.ಪಂ ಟಿಕೆಟ್ ನೀಡಬೇಕೆಂದು ಮನವಿ ಮಾಡಿದ್ದಾನೆ.
ಈಗಾಗಲೇ ಶಾಸಕ ಎಂ.ವೈ.ಪಾಟೀಲ್ ಹಾಗೂ ಮಾಜಿ ಶಾಸಕ, ಬಿಜೆಪಿ ಮುಖಂಡ ಮಾಲೀಕಯ್ಯ ಗುತ್ತೇದಾರ್ ಅವರಿಗೆ ಆಯಾ ಪಕ್ಷದ ಮುಖಂಡರು ಟಿಕೆಟ್ ನೀಡುವಂತೆ ದುಂಬಾಲು ಬಿದ್ದು, ಟಿಕೆಟ್ ಗಾಗಿ ಪೈಪೋಟಿ ನಡೆಸಿದ್ದಾರೆ.
