ಜಿಲ್ಲಾ ಸುದ್ದಿತುಮಕೂರುಮಹಿಳೆವಿಶೇಷಸ್ಪೆಷಲ್ ಸ್ಟೋರೀಸ್

ಗಣರಾಜ್ಯೋತ್ಸವದಲ್ಲಿ ವಾಯುಪಡೆ ಮುನ್ನಡೆಸಿದ ಜಿಲ್ಲೆಯ ಮೊದಲ ಮಹಿಳೆ

73ನೇ ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ಏರ್​ಫೋರ್ಸ್ ರೆಜಿಮೆಂಟ್ ಮುನ್ನಡೆಸಿದ ಮೊದಲ ಮಹಿಳಾ ವೈದ್ಯೆ ಎಂಬ ಕೀರ್ತಿಗೆ ತುಮಕೂರು ಮೂಲದ ಇಂಪನಾಶ್ರೀ ಪಾತ್ರರಾಗಿದ್ದಾರೆ. ಕೊರಟಗೆರೆ ತಾಲೂಕಿನ ಕೋಳಾಲ ಗ್ರಾಮದ ಯಲ್ಲರಾಜು ಹಾಗೂ ಕೆಎಸ್​ ಭಾನುಮತಿ ದಂಪತಿಯ ಪುತ್ರಿ ಇಂಪನಾಶ್ರೀ ಇದೀಗ ಇಂತದ್ದೊಂದು ಕೀರ್ತಿಗೆ ಪಾತ್ರರಾಗಿದ್ದಾರೆ.

ಬೆಂಗಳೂರಿನ ಏರ್​ ಕಮಾಂಡರ್ ಆಸ್ಪತ್ರೆಯಲ್ಲಿ ವೈದ್ಯೆಯಾಗಿರುವ ಇಂಪನಾಶ್ರೀ ಜನವರಿ 26ರಂದು ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ರಾಜಪಥದಲ್ಲಿ 3.3 ಕಿಲೋ ಮೀಟರ್ ಏರ್​ಪೋರ್ಸ್ ರೆಜಿಮೆಂಟನ್ನು ಪಥಸಂಚಲನದಲ್ಲಿ ನಡೆಸಿ ರಾಜ್ಯದ ಕೀರ್ತಿ ಪತಾಕೆ ಹಾರಿಸಿದ್ದಾರೆ.

ತುಮಕೂರಿನ ಸರ್ವೋದಯ ಪಿಯು ಕಾಲೇಜಿನಲ್ಲಿ ಪಿಯುಸಿ ಮುಗಿಸಿದ ಇಂಪನಾಶ್ರೀ ಈ ವೇಳೆ ಅಲ್ಲಿಯೇ ಎನ್​ಸಿಸಿಗೆ ಸೇರ್ಪಡೆಯಾದರು. ಸತತ ಪರಿಶ್ರಮದಿಂದ 2012ರ ಗಣರಾಜ್ಯೋತ್ಸವ ಪರೇಡ್​ನಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತ್ತು. ಎನ್​ಸಿಸಿ ಕೋಟಾದಡಿ ಹಾಸನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಇಂಪನಾಶ್ರೀಗೆ ಸೀಟು ಪಡೆದುಕೊಂಡರು. ಬಳಿಕ 2021ಮೇ ನಲ್ಲಿ ಬೆಂಗಳೂರಿನ ಏರ್ ಕಮಾಂಡರ್ ಆಸ್ಪತ್ರೆಯಲ್ಲಿ ವೈದ್ಯಯಾಗಿ ಆಯ್ಕೆಯಾದರು.

2012ರ ಪರೇಡ್​ನಲ್ಲಿ 4ನೇ ಬೆಟಾಲಿಯನ್ ಎನ್​ಸಿಸಿ ಕೆಡೆಟ್ ಆಗಿ ಭಾಗವಹಿಸಿದ್ದ ಇಂಪನಾಶ್ರೀಗೆ ಗಣರಾಜ್ಯೋತ್ಸವದಂದು ವಾಯುಪಡೆ ರೆಜಿಮೆಂಟ್ ಮುನ್ನಡೆಸುವ ಅವಕಾಶ ಸಿಕ್ಕಿತ್ತು.

Spread the love

Related Articles

Leave a Reply

Your email address will not be published. Required fields are marked *

Back to top button