Breaking NewsLatestಕ್ರೈಂಜಿಲ್ಲಾ ಸುದ್ದಿಬೆಂಗಳೂರುರಾಜ್ಯಸುದ್ದಿ

ಪಿಎಸ್‌ಐ ಹುದ್ದೆ ಅಕ್ರಮ ಪ್ರಕರಣ: ಕಾನ್ಸ್ ಟೇಬಲ್ ಕರಿಬಸವನಗೌಡ ಸಸ್ಪೆಂಡ್!

ಬೆಂಗಳೂರು: ಪಿಎಸ್‌ಐ 545 ಹುದ್ದೆ ನೇಮಕಾತಿ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಕಾನ್ಸ್ ಟೇಬಲ್ ಓರ್ವರನ್ನು ಅಮಾನತುಗೊಳಿಸಲಾಗಿದೆ.
ಪಿಎಸ್‌ಐ ಹುದ್ದೆ ನೇಮಕಾತಿಯಲ್ಲಿ ಆಯ್ಕೆಯಾಗಿದ್ದ ವಿವೇಕನಗರ ಠಾಣೆ ಕಾನ್ಸ್ ಟೇಬಲ್ ಕರಿಬಸವನಗೌಡ ಅವರನ್ನು ಸಸ್ಪೆಂಡ್ ಮಾಡಿ ಎಂದು ಡಿಸಿಪಿ ಅನುಚೇತ್ ಆದೇಶ ಹೊರಡಿಸಿದ್ದಾರೆ.
ಕರಿಬಸವನಗೌಡ, ಆಯ್ಕೆ ಆದೇಶ ಪ್ರತಿ ಸಿಗುವ ಮೊದಲೇ ಪಿಎಸ್‌ಐ ಡ್ರೆಸ್ ಧರಿಸಿ ಸ್ವಗ್ರಾಮದಲ್ಲಿ ಪ್ರಚಾರ ಗಿಟ್ಟಿಸಿದ್ದ. ಅದೂ ಕೂಡ ಕಾನ್ಸ್ ಟೇಬಲ್ ಹುದ್ದೆಗೆ ರಾಜೀನಾಮೆ ನೀಡದೆ ಪ್ರಚಾರ ನಡೆಸಿದ್ದ. ಪೊಲೀಸ್ ನಿಯಮಾವಳಿ ಉಲ್ಲಂಘನೆ ಹಿನ್ನೆಲೆಯಲ್ಲಿ ಕಾನ್ಸ್ ಟೇಬಲ್ ಕರಿಬಸವನಗೌಡ ಅವರನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ ಎಂದು ತಿಳಿದು ಬಂದಿದೆ.

Related Articles

Leave a Reply

Your email address will not be published. Required fields are marked *

Back to top button