Breaking NewsLatestಸುದ್ದಿ

ಲಂಕಾಗೆ ಔಷಧಿಗಳನ್ನು ಒದಗಿಸಿಕೊಡುವಂತೆ ಪುಟ್ಟಪರ್ತಿ ಟ್ರಸ್ಟ್ ಗೆ ಮನವಿ: ಅರ್ಜುನ್​​ ರಣತುಂಗ

ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಶ್ರೀಲಂಕಾದ ಜನರ ನೆರವಿಗೆ ಧಾವಿಸಬೇಕು ಎಂದು ಮಾಜಿ ಕ್ರಿಕೆಟಿಗ ಅರ್ಜುನ್​​ ರಣತುಂಗ ಅವರು ಪುಟ್ಟಪರ್ತಿ ಸತ್ಯಸಾಯಿ ಟ್ರಸ್ಟ್​ಗೆ ಮನವಿ ಮಾಡಿದ್ದಾರೆ.

ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಪುಟ್ಟಪರ್ತಿ ಪ್ರಶಾಂತಿ ನಿಲಯದಲ್ಲಿರುವ ಸತ್ಯಸಾಯಿ ಮಹಾ ಸಮಾಧಿಗೆ ಭೇಟಿ ನೀಡಿ, ಟ್ರಸ್ಟ್ ಕಚೇರಿಯಲ್ಲಿ ಮ್ಯಾನೇಜಿಂಗ್ ಟ್ರಸ್ಟಿಯಾದ ರತ್ನಾಕರ್ ರಾಜು ಅವರೊಂದಿಗೆ 2 ಗಂಟೆಗಳ ಕಾಲ ಸಭೆ ನಡೆಸಿದರು.
ಶ್ರೀಲಂಕಾದ ಜನರು ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಒಳಗಾಗಿದ್ದಾರೆ. ಇದರಿಂದಾಗಿ ಟ್ರಸ್ಟ್​ ಉದಾರವಾಗಿ ನಡೆದುಕೊಂಡು ಅವರ ಬೆಂಬಲಕ್ಕೆ ನಿಲ್ಲಬೇಕು ಎಂದು ಅವರು ಟ್ರಸ್ಟ್‌ಗೆ ಒತ್ತಾಯಿಸಿದರು. ಔಷಧಿಗಳನ್ನು ಒದಗಿಸಿಕೊಡುವ ಮನವಿಗೆ ಟ್ರಸ್ಟ್ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ರಣತುಂಗ ತಿಳಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button