ಜಿಲ್ಲಾ ಸುದ್ದಿಹುಬ್ಬಳ್ಳಿ - ಧಾರವಾಡ
ಹುಬ್ಬಳ್ಳಿ: ಬೆಳ್ಳಂಬೆಳಗ್ಗೆ ಪಾಲಿಕೆ ಜೆಸಿಬಿ ಗರ್ಜನೆ: ಪೊಲೀಸ್ ಬಿಗಿ ಭದ್ರತೆಯ ಲ್ಲಿ ಅತಿಕ್ರಮಣ ತೆರವು

ಧಾರವಾಡ: ಪುಟಪಾತ್ ಸೇರಿದಂತೆ ಸರ್ಕಾರಿ ಜಾಗವನ್ನು ಅತಿಕ್ರಮಣ ಮಾಡಿಕೊಂಡವರ ವಿರುದ್ಧ ಇಂದು ಬೆಳ್ಳಂಬೆಳಗ್ಗೆ ಹುಬ್ಬಳ್ಳಿಯಲ್ಲಿ ಹುಬ್ಬಳ್ಳಿ – ಧಾರವಾಡ ಮಾಹಾನಗರ ಪಾಲಿಕೆಯ ಜೆಸಿಬಿ ಗರ್ಜನೆ ಮಾಡಿದೆ. ಪೊಲೀಸ್ ಬಿಗಿ ಭದ್ರತೆಯಲ್ಲಿ ಮಾಹಾನಗರ ಪಾಲಿಕೆಯ ಅಧಿಕಾರಿಗಳು ಅತಿಕ್ರಮಣ ತೆರವು ನಡೆಸಿದರು.
ನಗರದ ವಿದ್ಯಾನಗರದಲ್ಲಿ ಜನಮನ್ನಣೆ ಗಳಿಸಿದ್ದ ಫುಡ್ ವಿಲ್ಲಾ ಕಾಂಪೌಂಡ್ನ್ನ ಬೆಳ್ಳಂಬೆಳಿಗ್ಗೆ ಮಹಾನಗರ ಪಾಲಿಕೆಯ ಅಧಿಕಾರಿಗಳು ಮುಂದೆ ನಿಂತು ತೆರವು ಮಾಡಿಸಿದರು. ಫುಡ್ ವಿಲ್ಲಾದ ಕಾಂಪೌಂಡ್ ಗೋಡೆಯೂ ಪುಟ್ ಪಾತ್ ಅತಿಕ್ರಮಣ ಮಾಡಿ ನಿರ್ಮಿಸಲಾಗಿದೆ ಹೇಳಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಮಾಡಿದ ಅಧಿಕಾರಿಗಳು ಈಗ ಗೋಡೆಯನ್ನು ತೆರವು ಮಾಡಿದ್ದಾರೆ.
ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಜೆಸಿಬಿ ಹಾಗೂ ಮಾಹಾನಗರ ಪಾಲಿಕೆಯ ಪೌರ ಕಾರ್ಮಿಕರನ್ನು ಬಳಸಿಕೊಂಡು ಅತಿಕ್ರಮಣ ತೆರವು ಮಾಡಲಾಯಿತು.




