ಹುಬ್ಬಳ್ಳಿ: ಉದ್ಯಮಿ ಮನೆಗೆ ಕನ್ನ; ಗದು ಹಣ, ವಾಚ್ ಕಳ್ಳತನ

ಹುಬ್ಬಳ್ಳಿ: ವಾಣಿಜ್ಯನಗರಿಯ ಹುಬ್ಬಳ್ಳಿಯ ಉದ್ಯಮಿಯೊಬ್ಬರ ಮನೆಗೆ ಮೂವರು ಜನ ಚಾಲಕಿ ಕಳ್ಳರು ಕಳ್ಳತನಕ್ಕೆ ಯತ್ನಿಸಿ ವಿಫಲವಾಗಿರುವ ಘಟನೆ ಬೆಳಕಿಗೆ ಬಂದಿದ್ದು, ಆರೋಪಿಗಳ ಪತ್ತೆಗಾಗಿ ಈಗ ಪೊಲೀಸರು ಬಲೆ ಬೀಸಿದ್ದಾರೆ.
ನಗರದ ಗೋಕುಲ ರಸ್ತೆಯ ಡಾಲರ್ಸ್ ಕಾಲನಿಯಲ್ಲಿರುವ ಉದ್ಯಮಿ ಸಂತೋಷ ಶೆಟ್ಟಿ ಮನೆಗೆ ಮೂವರು ಜನ ಚಾಲಕಿ ಖದೀಮ ಕಳ್ಳರು ಕನ್ನ ಹಾಕಿದ್ದು, ಲಾಕರ್ ಓಪನ್ ಆಗದೇ ಮರಳಿರುವ ಘಟನೆ ನಡೆದಿದೆ.
ಮನೆಯ ಹಿಂಬದಿಯ ಬಾಗಿಲು ಮುರಿದು ಒಳಗಡೆ ಪ್ರವೇಶ ಮಾಡಿರುವ ಕಳ್ಳರು ಕಳ್ಳತನಕ್ಕೆ ಯತ್ನಸಿದ್ದಾರೆ. ಆದರೆ ಕಳ್ಳರಿಗೆ ಮನೆಯ ಒಳಗಿನ ಲಾಕರ್ ಓಪನ್ ಆಗಿಲ್ಲ, ಬಳಿಕ ಚಾಲಕಿ ಕಳ್ಳರು ದೇವರ ಕೋಣೆಯಲ್ಲಿದ್ದ ಹಣ ಹಾಗೂ ಒಂದು ವಾಚ್ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ.
ಉದ್ಯಮಿ ಸಂತೋಷ ಶೆಟ್ಟಿ ಕುಟುಂಬಸ್ಥರು ಈ ಕುರಿತು ಗೋಕುಲ್ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕೆ ಭೇಡಿ ನೀಡಿದ ಪೊಲೀಸರು ಪರಿಶೀಲನೆ ಕೈಗೊಂಡಿದ್ದಾರೆ. ಮನೆಯ ಹೊರ ಆವರಣದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲಿಸಿರುವ ಪೊಲೀಸರು ಈಗ ಚಾಲಾಕಿ ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ. ಈ ಕುರಿತು ಗೋಕುಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




