ಚಿಕ್ಕಮಗಳೂರು
ಅಂಗನವಾಡಿಗಳ ಪ್ರಾರಂಭೋತ್ಸವ; ಉತ್ಸಾಹದಿಂದ ತೆರಳಿದ ಚಿಣ್ಣರು

ಚಿಕ್ಕಮಗಳೂರು: ಕೋವಿಡ್ ಕಾರಣದಿಂದ ಕಳೆದ ಒಂದೂವರೆ ವರ್ಷದಿಂದ ಸ್ಥಗಿತವಾಗಿದ್ದ ಅಂಗನವಾಡಿ ಕೇಂದ್ರಗಳು ಪ್ರಾರಂಭಗೊಂಡಿದೆ. ನಗರದ ಹೌಸಿಂಗ್ ಬೋರ್ಡ್ ಅಂಗನವಾಡಿ ಕೇಂದ್ರಕ್ಕೆ ಜಿಲಾಧಿಕಾರಿ ಕೆ ಎನ್ ರಮೇಶ್ ಭೇಟಿಕೊಟ್ಟು ಮಕ್ಕಳನ್ನು ಸ್ವಾಗತಿಸಿದರು.
ಜಿಲ್ಲೆಯ ಅಂಗನವಾಡಿ ಕೇಂದ್ರಗಳ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಕೆ ಎನ್ ರಮೇಶ್ ಉದ್ಘಾಟಿಸಿದರು.
ಚಿಣ್ಣರಿಗೆ ಅಂಗನವಾಡಿ ತರಗತಿಗಳ ಮರು ಪ್ರಾರಂಭ ಉತ್ಸಾಹ ಹೆಚ್ಚಿಸಿತ್ತು. ಲವಲವಿಕೆಯಿಂದ ಎಲ್ಲಾ ಮಕ್ಕಳು ತಮ್ಮ ಪೋಷಕರೊಂದಿಗೆ ಹತ್ತಿರದ ಅಂಗನವಾಡಿ ಕೇಂದ್ರಗಳಿಗೆ ತೆರಳಿ, ಕೇಕ್ ಕತ್ತರಿಸುವ ಮೂಲಕ ಮಕ್ಕಳನ್ನು ಸ್ವಾಗತಿಸಿ ಸಂಭ್ರಮಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಪದ್ಮಾವತಿ ನಗರಸಭೆ ಮಾಜಿ ಅಧ್ಯಕ್ಷೆ ಕವಿತಾ ಶೇಖರ್, ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ತಾರಾನಾಥ್ ಉಪಸ್ಥಿತರಿದ್ದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬಿ ಎಚ್ ಕೃಷ್ಣಪ್ಪ ಸ್ವಾಗತಿಸಿದರು. ದೀಪಾ ನಿರೂಪಿಸಿ, ರಂಗನಾಥ್ ವಂದಿಸಿದರು.




