ಹುಬ್ಬಳ್ಳಿ - ಧಾರವಾಡ
ಮಳೆ ನೀರು ತೆಗೆದು ಹೈರಾಣಾದ ಕುಟುಂಬ; ಮನೆ ತೊರೆಯಲು ನಿರ್ಧಾರ

ಧಾರವಾಡ: ಕಳೆದ ನಾಲ್ಕೈದು ದಿನಗಳಿಂದ ಧಾರವಾಡ ಜಿಲ್ಲೆಯಾದ್ಯಂತ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಹಲವು ಅವಾಂತರಗಳು ಸೃಷ್ಠಿಯಾಗಿದ್ದು, ನಿರಂತರ ಮಳೆಯಿಂದಾಗಿ ಮನೆಯೊಂದು ಸಂಪೂರ್ಣ ಜಲಾವೃತವಾದ ಘಟನೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಕಡಪಟ್ಟಿ ಗ್ರಾಮದಲ್ಲಿ ನಡೆದಿದೆ.
ಮಂಜುನಾಥ ಎಂಬುವವರ ಮನೆಯಲ್ಲಿ ನೀರು ಸಂಗ್ರಹವಾಗಿತ್ತಿದ್ದು, ಕಳೆದ ರಾತ್ರಿಯಿಂದ ಮಳೆಯ ನೀರನ್ನು ಮನೆಯಿಂದ ಹೊರಹಾಕಿ ಕುಟುಂಬಸ್ಥರು ಹೈರಾಣಾಗಿದ್ದಾರೆ. ಈಗ ಮಳೆರಾಯನ ಇಂದ ಮನೆಯವರು ಕಷ್ಟದಲ್ಲಿ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ನೀರು ಸಂಗ್ರಹದ ಪರಿಣಾಮ ಮನೆಯ ಪಾತ್ರೆ ಪಗಡೆಗಳು ತೇಲುತ್ತಲಿದ್ದು ಅಡುಗೆ ಬೇಯಿಸಿಕೊಳ್ಳಲು ಕೂಡಾ ಆಗದಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ ಎರೆಡು ಮೂರು ವರ್ಷಗಳಿಂದ ಸತತ ಮಳೆಗೆ ಮನೆಗೆ ಈ ಪರಿಸ್ಥಿತಿ ಉಂಟಾಗಿದ್ದು, ಸದ್ಯ ಕುಟುಂಬಸ್ಥರು ಅಪಾಯದ ಮುನ್ಸೂಚನೆಯಿಂದ ಮನೆ ತೊರೆದು ಸಂಬಂಧಿ ಮನೆಗಳಿಗೆ ತೆರಳಲು ಮುಂದಾಗಿದ್ದಾರೆ.




