ಕಲಬುರ್ಗಿಜಿಲ್ಲಾ ಸುದ್ದಿ

ಬಾಡಿಗೆ ಮನೆಯ ಯಜಮಾನನ ಕೊಲೆ : 7 ಜನ ಆರೋಪಿಗಳ ಬಂಧನ

ಕಲಬುರಗಿ: ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆಗೈದು ನಂತರ ರೈಲ್ವರ ಹಳಿಯಲ್ಲಿ ಹಾಕಿ ಇದೊಂದು ಆತ್ಮಹತ್ಯೆ ಅಂತ ಬಿಂಬಿಸಲು ಪ್ರಯತ್ನಿಸಿದ ಮಹಿಳೆ ಸೇರಿ 7 ಜನ ಆರೋಪಿಗಳನ್ನು ವಾಡಿ ರೈಲ್ವೆ ಪೊಲೀಸರು ಬಂಧಿಸಿದ್ದಾರೆ.

ಕೊಲೆಗೆ ಸುಪಾರಿ ನೀಡಿದ್ದ ಮಹಾನಂದ ಉಳ್ಳೆ, ಮಾರುತಿ ಪರಿಟ್, ಅಶೋಕ್ ತಿಮ್ಮಯ್ಯ, ಸುನಿಲ್ ಅಲಿಯಾಸ್ ಮಂಜ್ಯಾ, ಸೂರ್ಯಕಾಂತ, ಅಂಬರೀಶ್ ಪರಿಟ್, ಹಾಗೂ ಓರ್ವ ಅಪ್ರಾಪ್ತ ಬಾಲಕನ ಬಂಧಿತ ಆರೋಪಿಗಳು. ಕಳೆದ ಸೆ. 06 ರಂದು ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಮನೆಯಿಂದ ಸನಬೀರಸಿಂಗ್ ಎಂಬಾತನನ್ನು ಕರೆದೊಯ್ದು ಕಲಬುರಗಿ ತಾಲೂಕಿನ ಸಾವಳಗಿ ಬಳಿ ಹಗ್ಗದಿಂದ ಬಿಗಿದು ಕೊಲೆಗೈದಿದ್ದರು. ನಂತರ ಇದೊಂದು ಕೊಲೆ ಅಂತ ಬಿಂಬಿಸಲು ದೇಹವನ್ನು ಹಳಿ ಮೇಲೆ ಹಾಕಿ ದೇಹ ಎರಡು ತುಂಡಾಗುವಂತೆ ನೋಡಿಕೊಂಡಿದ್ದರು. ಆದ್ರೆ ಅನುಮಾನಗೊಂಡ ರೈಲ್ವೆ ಪೊಲೀಸರು ತನಿಖೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಕೊಲೆಯಾದ ಸನಬೀರಸಿಂಗ್ ಹಾಗೂ ಆತನ ಕುಟುಂಬಸ್ಥರು ಕಲಬುರಗಿಯ ಮಹಾನಂದಾ ಎಂಬುವರ ಮನೆಯಲ್ಲಿ ಬಾಡಿಗೆ ಇದ್ದರು.‌ ಆದ್ರೆ ಮಹಾನಂದಾ ಅವಳ ಅಸಹಾಯಕತೆ ಬಳಸಿಕೊಂಡು ಆಕೆಯ ಬಳಿ ಪದೆ ಪದೆ ಹಣಕ್ಕಾಗಿ ಪಿಡಿಸುತ್ತಿದ್ದನಂತೆ, ಹಣ ಕೊಡದಿದ್ರೆ ಮರ್ಯ್ಯಾದೆ ಹಾಳು ಮಾಡುವದಾಗಿ ಬೇದರಿಕೆ ಹಾಕುವದು ಮತ್ತು ಮಹನಂದಾಳ ತಂಗಿ‌ಯ ಮನೆಗೆ ಹೋಗಿ ಇಲ್ಲಸಲ್ಲದು ಹೇಳಿ ಅವಳ ಬದುಕು ಹಾಳು ಮಾಡುವದಾಗಿ ಬೇದರಿಕೆ ಸನಬೀರಸಿಂಗ್ ಹಾಕುತ್ತಿದ್ದನಂತೆ. ಇದರಿಂದ ಬೇಸತ್ತಿದ್ದ ಮಹಾನಂದಾ 5 ಲಕ್ಷಕ್ಕೆ‌ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾಗಿ ಒಪ್ಪಿಕೊಂಡಿದ್ದಾಳೆ ಅಂತ ಪೊಲೀಸರು ತಿಳಿಸಿದ್ದಾರೆ. ಈ ಕುರಿತು ವಾಡಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button