ಜಿಲ್ಲಾ ಸುದ್ದಿ

ದಲಿತ ಯುವಕರ ಮೇಲೆ ಹಲ್ಲೆ : ಹಿಂದೂ ಸಂಘಟನೆಗಳಿಂದ ಪ್ರತಿಭಟನೆ

ಕೊಡಗು : ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಗುಡುಗಳಲೆಯಲ್ಲಿ ಭಾನುವಾರದಂದು ದಲಿತ ಯುವಕರನ್ನು ಅಡ್ಡಗಟ್ಟಿ ಹಲ್ಲೆ ಮಾಡಿದ ಅನ್ಯಕೋಮಿನವರನ್ನು ಬಂದಿಸಿ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿ ಹಿಂದೂ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು.

ಹಲ್ಲೆ ಮಾಡಿದವರ ಮೇಲೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಶನಿವಾರಸಂತೆ ಪೋಲೀಸ್ ಠಾಣಾ ಮುಂಬಾಗ ಹಿಂದೂ ಸಂಘಟಕರು ಧರಣಿ ಕುಳಿತರು.

ದಲಿತರ ಮೇಲೆ ಹಲ್ಲೆ ನಡೆದಿರುವುದರಿಂದ ಅಟ್ರಾಸಿಟಿ ಕೇಸ್ ದಾಖಲಿಸಬೇಕೆಂದು ಒತ್ತಾಯಿಸಿದ ಹಿಂದೂ ಸಂಘಟಕರು ಶನಿವಾರಸಂತೆ ಸರ್ಕಲ್ ಇನ್ಸ್ ಪೆಕ್ಟರ್ ರವರೀಗೆ ಮನವಿ ಸಲ್ಲಿಸಿದರು.

ಮನವಿ ಪಡೆದು ಮಾತನಾಡಿದ ವೃತ್ತ ನಿರಿಕ್ಷಕ ಪರಶಿವಮೂರ್ತಿ ಅವರು, ಕಾನೋನಿನಂತೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಹಲ್ಲೆ ಮಾಡಿದವರನ್ನು 24ಗಂಟೆ ಒಳಗೆ ಬಂದಿಸಬೇಕು ಎಂದು ಹಿಂದೂ ಸಂಘಟನೆಗಳು ಪೊಲೀಸರಿಗೆ ಕಾಲಾವಕಾಶ ನೀಡಿದರು

Related Articles

Leave a Reply

Your email address will not be published. Required fields are marked *

Back to top button