ಚಿಕ್ಕಮಗಳೂರುಜಿಲ್ಲಾ ಸುದ್ದಿ
ಭಾರೀ ಮಳೆಯಿಂದ ಕುಸಿದ ರಸ್ತೆ; ಸಂಚಾರ ನಿಷೇಧ

ಚಿಕ್ಕಮಗಳೂರು: ವಿಪರೀತ ಮಳೆಯಿಂದ ಹೊನ್ನಳ್ಳ ಚೆಕ್ಪೋಸ್ಟ್ ಬಳಿ ರಸ್ತೆಯು ಭಾಗಶಃ ಕೊಚ್ಚಿ ಹೋಗಿರುವ ಪರಿಣಾಮ ವಾಹನ ಸಂಚಾರ ಸ್ಥಗಿತಗೊಂಡಿದ್ದು, ಬದಲಿ ರಸ್ತೆಗಳನ್ನು ಬಳಸುವಂತೆ ಜಿಲ್ಲಾಡಳಿತ ಸೂಚಿಸಿದೆ.
ಈ ರಸ್ತೆ ಕುಸಿದ ನಂತರ ಇನ್ನಷ್ಟು ಅನಾಹುತಕಾರಿಯಾಗಿದೆ. ಎಡಭಾಗದಲ್ಲಿ ಹೊನ್ನಾಳ ನದಿ ಹರಿಯುತ್ತದೆ. ಬಲಭಾಗದಲ್ಲಿ ಬಂಡೆಕಲ್ಲಿನ ಗುಡ್ಡವಿದೆ. ತಕ್ಷಣಕ್ಕೆ ದುರಸ್ತಿಕಾರ್ಯ ಅಸಾಧ್ಯವಾಗಿದೆ. ಕೆಳಮಲ್ಲಂದೂರಿನ ಸಿದ್ದರಬಾನು, ಮುತ್ತೋಡಿ, ಜಾಗರ, ಶಿರವಾಸೆ, ಗಾಳಿಗುಡ್ಡೆ ಗ್ರಾಮಗಳಿಗೆ ಸಂಪರ್ಕಿಸುವ ಈ ರಸ್ತೆಯಲ್ಲಿ ವಾಹನಗಳ ಸಂಚಾರ ನಿಷೇಧಿಸಲಾಗಿದೆ.
ಹೀಗಾಗಿ ಮುತ್ತೋಡಿ, ಜಾಗರ, ಶಿರವಾಸೆ ಗ್ರಾಮಗಳಿಗೆ ತೆರಳಲು ಚಿಕ್ಕಮಗಳೂರಿನ ಕೈಮರ ಕ್ರಾಸ್, ಅತ್ತಿಗುಂಡಿ ಕ್ರಾಸ್ ಅಥವಾ ಚಿಕ್ಕಮಗಳೂರಿನಿಂದ ಆಲ್ದೂರು, ಕಡಬಗೆರೆ, ಖಾಂಡ್ಯ, ಕಡವಂತಿ, ಬೊಗಸೆ, ಹೊನ್ನಾಳ ಕ್ರಾಸ್ ರಸ್ತೆಗಳಲ್ಲಿ ಸಂಚರಿಸುವಂತೆ ಜಿಲ್ಲಾಡಳಿತ ಸೂಚಿಸಿದೆ.




