ಜಿಲ್ಲಾ ಸುದ್ದಿಬಾಗಲಕೋಟೆ

ಬಾಗಲಕೋಟೆ ಜಿಲ್ಲೆಯಾದ್ಯಂತ ಭಾರೀ ಮಳೆ: ತಗ್ಗು ಗುಂಡಿಗಳಲ್ಲಿ ನೀರು ವಾಹನ ಸವಾರರು ಪರದಾಟ!!

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ವಿವಿಧೆಡೆ ಧಾರಾಕಾರ ಮಳೆಯಾಗಿದ್ದು, ತಗ್ಗು ಗುಂಡಿಗಳಲ್ಲಿ ನೀರು ನಿಂತು ವಾಹನ ಸವಾರರು ಪರದಾಡುವಂತಾಗಿತ್ತು.

ಬಾಗಲಕೋಟೆ ಜಿಲ್ಲೆಯಲ್ಲಿ ಕಳೆದ ವಾರದಿಂದ ಮೋಡಕವಿದ ವಾತಾವರಣ ಜೊತೆಗೆ ಮಳೆಯಾಗುತ್ತಿದ್ದು, ನಿನ್ನೆ ಸಂಜೆ ಎರಡು ಗಂಟೆಗೂ ಅಧಿಕ ಕಾಲ ಭಾರೀ ಮಳೆ ಆಗಿದೆ. ಬಾಗಲಕೋಟೆ, ಬಾದಾಮಿ, ಹುನಗುಂದ, ಇಳಕಲ್ ತಾಲೂಕಿನಲ್ಲಿ ಮಳೆ ಆಗಿದ್ದು, ಹುನಗುಂದ ತಾಲೂಕಿನ ರಕ್ಕಸಗಿ ಗ್ರಾಮದಲ್ಲಿ ಧಾರಾಕಾರ ಮಳೆಯಿಂದ ರಸ್ತೆಯಲ್ಲಿನ ಬೃಹತ್ ಗುಂಡಿಗಳು ಪುಟ್ಟ ಪುಟ್ಟ ಹೊಂಡಗಳಾಗಿವೆ.

ವಾಹನ ಸಂಚಾರ ಮಾಡಲು ಚಾಲಕರು ಹರಸಾಹಸ ಪಡುತ್ತಿದ್ದಾರೆ. ನೀರು ತುಂಬಿದ ಗುಂಡಿಯ ಆಳ ತಿಳಿಯದೇ ಬಸ್ ಚಲಾಯಿಸಲು ಚಾಲಕರು ಹಿಂದೇಟು ಹಾಕಿದ್ದಾರೆ. ರಸ್ತೆ ದುರಸ್ತಿ ಮಾಡಿಸಿ ಎನ್ನುವ ಜನರ ಕೂಗೂ ಜನರ ಬೇಡಿಕೆಯಾಗಿದೆ. ಇನ್ನು ಬಾದಾಮಿಯಲ್ಲಿ ಅಕ್ಕ ತಂಗಿ ಜಲಪಾತ ಭೋರ್ಗರೆದಿದ್ದು. ಬೆಟ್ಟಗುಡ್ಡಗಳ ಮಧ್ಯೆ ಜಲಪಾತ ನೋಡುಗರ ಕಣ್ಮನ ಸೆಳೆಯುತ್ತದೆ.

Spread the love

Related Articles

Leave a Reply

Your email address will not be published. Required fields are marked *

Back to top button