ಉತ್ತರ ಕನ್ನಡಜಿಲ್ಲಾ ಸುದ್ದಿ

ಗೋಕರ್ಣ : ಸಮುದ್ರ ಸೆಳೆತಕ್ಕೆ ಸಿಕ್ಕ ನಾಲ್ವರ ರಕ್ಷಣೆ

ಕಾರವಾರ : ಸಮುದ್ರದಲ್ಲಿ ಈಜಾಡಲು ತೆರಳಿದಾಗ ಪ್ರಾಣಾಪಾಯದಲ್ಲಿದ್ದ ಪ್ರವಾಸಿಗರನ್ನು ರಕ್ಷಿಸಿದ ಘಟನೆ ಶುಕ್ರವಾರ ಸಂಜೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಕಡಲತೀರದಲ್ಲಿ ನಡೆದಿದೆ. ಹಾಸನ ಜಿಲ್ಲೆಯ ಅರಸೀಕೆರೆಯವರಾದ ಒಟ್ಟು ನಾಲ್ಕು ಜನರು ಗೋಕರ್ಣ ಪ್ರವಾಸಕ್ಕೆ ಬಂದಿದ್ದು, ಸಮುದ್ರದಲ್ಲಿ ಈಜಾಡಲು ತೆರಳಿದಾಗ ಈ ಅವಘಡ ಸಂಭವಿಸಿದೆ. ತನುಜಾ (20) ಅಮೃತ (20) ಮಂಜುನಾಥ (22) ನಿರಂಜನ ( 21) ಪ್ರಾಣಾಪಾಯದಿಂದ ಪಾರಾದ ಪ್ರವಾಸಿಗರಾಗಿದ್ದಾರೆ.

ಪ್ರವಾಸಿಗರು ಸಮುದ್ರದ ಸೆಳೆತಕ್ಕೆ ಸಿಲುಕಿ ಮುಳುಗುತ್ತಿರುವುದನ್ನು ಗಮನಿಸಿದ ಬೋಟಿಂಗ್ ಗೋಕರ್ಣ ಹಾಲಿಡೇ ಮೇಕರ್ಸ್ ಸಿಬ್ಬಂದಿಗಳಾದ ಮಹೇಶ ಪೆಡ್ನೇಕರ್, ಮಹೇಶ ಹರಿಕಾಂತ, ಕಮಲಾಕರ್ ಹರಿಕಾಂತ, ಜೆಸ್ಕಿ ಡ್ರೈವರ್, ಲೈಫ್ ಗಾರ್ಡ್ ಸಿಬ್ಬಂದಿಗಳಾದ ಸಂದೀಪ ಕುರ್ಲೆ, ಶಿವಪ್ರಸಾದ್ ಅಂಬಿಗ, ಪ್ರವಾಸಿ ಮಿತ್ರ ಗಣಪತಿ ಗಾವಡಿ, ಸ್ಥಳೀಯರಾದ ಗಣಪತಿ, ವಿಠ್ಠಲ, ಹರಿಶ್ಚಂದ್ರ ರಕ್ಷಣೆಗೆ ಧಾವಿಸಿದವರಾಗಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button