ಉತ್ತರ ಕನ್ನಡಜಿಲ್ಲಾ ಸುದ್ದಿರಾಜಕೀಯ

ನಮ್ಮ ಮನೆಯಲ್ಲಿ ಅಲ್ಲಾ, ಏಸು ಭಾವಚಿತ್ರ ಇಟ್ಟಿಲ್ಲ: ಮಾಜಿ ಶಾಸಕ ಸತೀಶ್ ಸೈಲ್ ಆಕ್ರೋಶ

ಕಾರವಾರ : ಬಿಜೆಪಿಯವರು ಹಿಂದುತ್ವ ಎನ್ನುತ್ತಾರೆ. ನಮ್ಮ ಮನೆಯಲ್ಲಿ ಅಲ್ಲಾ ಮತ್ತು ಏಸು ಭಾವಚಿತ್ರ ಇಟ್ಟಿದ್ದೇವೆಯೇ ? ನಮಗೂ ಹಿಂದೂತ್ವ ಗೊತ್ತಿದೆ. ಬಿಜೆಪಿಯವರು ಹಿಂದೂತ್ವ ಬಳಸಿ ನಮ್ಮನ್ನು ಬೇರೆಡೆ ಒಯ್ಯುತ್ತಿದ್ದಾರೆ. ನಾವು ನಮ್ಮ ಮನೆಯಲ್ಲಿ ಗಣಪತಿಯನ್ನು ಪೂಜಿಸುತ್ತಿದ್ದೇವೆ. ಬೇರೆ ದೇವರನ್ನಲ್ಲ ಎಂದು ಬಿಜೆಪಿಯವರು ವಿಧಾನ ಪರಿಷತ್ ಚುನಾವಣೆಯಲ್ಲಿ ಹಿಂದೂತ್ವದ ಅಡಿ ಮತ ಸೆಳೆಯುತ್ತಿರುವ ಕುರಿತು ಎಂದು ಮಾಜಿ ಶಾಸಕ ಸತೀಶ್ ಸೈಲ್​​​​​ ಆಕ್ರೋಶ ವ್ಯಕ್ತಪಡಿಸಿದರು.

ಹಿಂದೆ ಪರೇಶ್ ಮೇಸ್ತ ಪ್ರಕರಣವನ್ನು ಬಳಸಿಕೊಂಡರು.ಈಗ ಪರೇಶ್ ಮೇಸ್ತ ತಂದೆ ಕಾಣೆಯಾಗಿದ್ದಾರೆ‌.ಅವರು ನಿಜವಾದ ಹಿಂದೂ. ಅಂದು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಆರ್.ವಿ. ದೇಶಪಾಂಡೆಯವರು ಪರೇಶ್ ಮೇಸ್ತನ ತಂದೆಗೆ ಸಹಾಯಾರ್ಥ ಹಣ ನೀಡಿದ್ದರು. ಪಡೆದ ಹಣವನ್ನು ಪರೇಶ್ ಮೇಸ್ತ ತಂದೆ ತಿರಸ್ಕರಿಸಿದರು. ಆದರೆ ಕೊಟ್ಟ ಹಣ ವಾಪಸ್ ಬರಲಿಲ್ಲ ಎಂದು ಸತೀಶ್ ಸೈಲ್ ಅವರು ಬಿಜೆಪಿ ವಿರುದ್ದ ಕಿಡಿ ಕಾರಿದರು.

Spread the love

Related Articles

Leave a Reply

Your email address will not be published. Required fields are marked *

Back to top button