ಬಾಗಲಕೋಟೆ

ಹೊಟ್ಟೆನೋವು ತಾಳಲಾರದೆ ಸೈನಿಕ ನೇಣಿಗೆ ಶರಣು

ಬಾಗಲಕೋಟೆ: ಹೊಟ್ಟೆನೋವು ತಾಳಲಾರದೆ ಸೈನಿಕನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ತಾಲೂಕಿನ ಹಂಗರಗಿ ಗ್ರಾಮದಲ್ಲಿ ನಡೆದಿದೆ.

ಈರಯ್ಯ ಅಂದಾನಯ್ಯ ಹಿರೇಮಠ(38) ಆತ್ಮಹತ್ಯೆಗೆ ಶರಣಾದ ದುರ್ದೈವಿಯಾಗಿದ್ದು. ಕಳೆದ 20 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಕೆಲಸ ಮಾಡುತ್ತಿದ್ದನು. ಬುಧವಾರ ಶೌಚಾಲಯಕ್ಕೆ ಹೋಗುತ್ತೇನೆಂದು ಮನೆಯ ಹೊರಗಡೆ ಹೋಗಿ ಹಂಗರಗಿ ಗ್ರಾಮದ ಅಂಗನವಾಡಿ ಕಂಪೌಂಡ್ ಬಳಿಯ ಗಿಡಕ್ಕೆ ಟಾವೆಲ್ ನಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಕುರಿತು ಮೃತ ಸೈನಿಕನ ತಂದೆ ಅಂದಾನಯ್ಯ ಹಿರೇಮಠ ದೂರು ನೀಡಿದ್ದು. ಕೆರೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button