ಜಿಲ್ಲಾ ಸುದ್ದಿ

ಮಸೀದಿಯಿಂದ ಆಹಾರ ಧಾನ್ಯದ ಕಿಟ್ ವಿತರಣೆ

ಚಿಕ್ಕಮಗಳೂರು: ನಗರದ ಎಂ.ಜಿ.ರಸ್ತೆಯಲ್ಲಿ 140 ವರ್ಷ ಇತಿಹಾಸವುಳ್ಳ ಮಸೀದಿಯಾದ ಮಸ್ಜಿದೆ ಕೀಜ್ರಿ ಮತ್ತು ಸಮಿತಿಯಿಂದ ಎಲ್ಲಾ ಧರ್ಮದ ಬಡ ಕುಟುಂಬಗಳಿಗೆ 550 ಆಹಾರ ಧಾನ್ಯ ಕಿಟ್ ವಿತರಣೆ ಮಾಡಲಾಯಿತು.

ಒಟ್ಟು 6.90 ಲಕ್ಷ ರೂ. ಮೊತ್ತದ 550 ಆಹಾರ ಧಾನ್ಯದ ಕಿಟ್ಗಳು, 2 ಆಕ್ಸಿಜನ್ ಕಾನ್ಸನ್ಟ್ರೇಟರ್ ಜತೆಗೆ 20 ಆಕ್ಸಿಮೀಟರ್ ಉಚಿತವಾಗಿ ನೀಡುತ್ತಿರುವುದಾಗಿ ಕಮಿಟಿ ಮಸ್ಜಿದೆ ಕಮಿಟಿ ಅಧ್ಯಕ್ಷ ಸಿ.ಎನ್.ಸಿಕಂದರ್ ಮೊಹಮ್ಮದ್ ಖಾನ್ ತಿಳಿಸಿದರು.

ಈ ವೇಳೆ ಇಮಾಮ್ ಜುನೇದ್ ಅಹಮದ್ ಸಿದ್ದಿ, ವಕ್ಫ್ಬೋರ್ಡ್ ಅಧಿಕಾರಿ ಜರೀನಾಬೇಗಂ, ಸಮಿತಿ ಸದಸ್ಯರಾದ ತಾಜ್ ಅಹ್ಮದ್ ಖಾನ್, ಸಿ.ನಿಸಾರ್ ಅಹ್ಮದ್ಖಾನ್, ಡಾ.ಖಾಲಿದ್ ಅಹ್ಮದ್ಖಾನ್, ಅಬ್ದುಲ್ ಮಜೀದ್, ಫಸಲ್ ಮೊಹಮ್ಮದ್, ಸಮದುಲ್ಲಾ ಖಾನ್ ಇದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button