ಜಿಲ್ಲಾ ಸುದ್ದಿ

ಕೂಡ್ಲೂರು‌ ಗ್ರಾ.ಪಂ.ನಿಂದ 20 ದಿನದಿಂದ ಹಸಿದವರಿಗೆ ಆಹಾರ

ರಾಮನಗರ: ಕೊರೊನಾದಂತಹ ಸಾಂಕ್ರಾಮಿಕ ರೋಗದ ಸಂಧಿಗ್ದತೆಯ ಸಂದರ್ಭದಲ್ಲಿ, ಕಳೆದ ೨೦ ದಿನಗಳಿಂದಲೂ ಹಸಿದವರಿಗೆ ಅನ್ನ ನೀಡುವ ಮೂಲಕ ಚನ್ನಪಟ್ಟಣದ ಕೂಡ್ಲೂರು ಗ್ರಾ.ಪಂ. ಮಾದರಿಯಾಗಿದೆ.

ಕಳೆದ‌ 21 ದಿನಗಳಿಂದ ಗ್ರಾಮ ಪಂಚಾಯತಿ ಅಧ್ಯಕ್ಷ ಗುಂಡಪ್ಪ ನೇತೃತ್ವದಲ್ಲಿ ಪಿಡಿಒ ಪದ್ಮ ಹಾಗೂ ಸದಸ್ಯರು ಹಾಗೂ ದಾನಿಗಳ ಸಹಕಾರದಲ್ಲಿ ಹಸಿದವರಿಗೆ ಅನ್ನ ನೀಡುವ ಕಾರ್ಯ ಮಾಡುತ್ತಿದ್ದಾರೆ.

ಪ್ರತಿನಿತ್ಯ ನೂರಾರು ಮಂದಿಗೆ ಆಹಾರ ವಿತರಿಸಲಾಗುತ್ತಿದೆ. ಕೂಡ್ಲೂರು ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಪದ್ಮ ಹಾಗೂ ಪಂಚಾಯಿತಿ ಸದಸ್ಯರುಗಳ ಸೇವಾಕಾರ್ಯಕ್ಕೆ ತಮ್ಮ ಸಹಕಾರವನ್ನು ವ್ಯಕ್ತಪಡಿಸಿರುವುದು ಪ್ರತಿನಿತ್ಯದ ಹಸಿದವರಿಗೆ ತುತ್ತು ಕಾರ್ಯಕ್ಕೆ ಸಹಕಾರಿಯಾಗಿದೆ. ಅಲ್ಲದೆ ದಾನಿಗಳು ಕೂಡ ಈ ಕಾರ್ಯಕ್ಕೆ ಮುಕ್ತಮನಸ್ಸಿನಿಂದ ಸಹಕಾರ ನೀಡುತ್ತಿರುವುದನ್ನು ಮರೆಯಲು ಸಾದ್ಯವಿಲ್ಲ ಎನ್ನುತ್ತಾರೆ ಸ್ಥಳೀಯರು.

ಪ್ರತಿದಿನ ವಿಭಿನ್ನ ರೀತಿಯ ಆಹಾರವನ್ನು ತಯಾರು ಮಾಡುತ್ತಿದ್ದು ವಾರದ ಆರು ದಿವವೂ ವಿಶೇಷ, ಫಲವ್, ಚಿತ್ತನ್ನ, ಪುಳಿಯೋಗರೆ, ವಾಂಗಿಬಾತ್, ಉಪ್ಪಿಟ್ಟು, ಮೆಂತೆಬಾತ್, ಭಾನುವಾರದಂತಹ ದಿನಗಳಲ್ಲಿ ಬಿರಿಯಾನಿ ಬಡಿಸಲಾಗುತ್ತಿದೆ.

ಪ್ರತಿನಿತ್ಯ ಗ್ರಾಮದ ಹಾಗೂ ರಸ್ತೆಯಲ್ಲಿ ಓಡಾಡುವ ನಿರ್ಗತಿಕರು,ಬಿಕ್ಷುಕರು,ಕೂಲಿ‌ ಕಾರ್ಮಿಕರಿಗೆ ತುತ್ತು ನೀಡುವ ಕಾರ್ಯ ನೆಡೆಯುತ್ತಿದೆ.

Spread the love

Related Articles

Leave a Reply

Your email address will not be published. Required fields are marked *

Back to top button