ಚಿಕ್ಕಮಗಳೂರುಜಿಲ್ಲಾ ಸುದ್ದಿ

ರಾಷ್ಟ್ರಮಟ್ಟದ ಟಿಎಸ್​​ಡಿ ರ‍್ಯಾಲಿಗೆ ಜಿಲ್ಲಾಧಿಕಾರಿ ಚಾಲನೆ

ಚಿಕ್ಕಮಗಳೂರು: ರಾಷ್ಟ್ರಮಟ್ಟದ ಟಿಎಸ್​​ಡಿ ರ‍್ಯಾಲಿಗೆ ಜಿಲ್ಲಾಧಿಕಾರಿ ಕೆ ಎನ್ ರಮೇಶ್ ನಗರದ ಹೊರವಲಯ ಕೈಮರದ ಸಿರಿ ನೇಚರ್ ರೂಟ್ಸ್ ನಿಂದ ಚಾಲನೆ ನೀಡಿದರು.

ದಿ ಮೋಟರ್ ಸ್ಫೋರ್ಟ್ ಕ್ಲಬ್ ಹಾಗೂ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದು, ಈ ರ‍್ಯಾಲಿ ನೇವಿಗೇಷನ್ ಮತ್ತು ಲೆಕ್ಕಾಚಾರಿಕವಾಗಿದ್ದು, ಟೈಪ್ಸ್ಫೀಡ್ ಡಿಸ್ಟೆನ್ಸ್ ಫಾರ್ಮೆಟ್ ನಲ್ಲಿ ನಡೆಯುತ್ತಿದೆ.

ಲೆಗ್ 1ರಲ್ಲಿ 180 ಕಿ ಮೀ ಮತ್ತು ಲೆಗ್ 2ರಲ್ಲಿ 60 ಕಿಮೀ ಸೇರಿದಂತೆ 240 ಕಿ ಮೀ ಕ್ರಮಿಸಬೇಕಾದ ರ‍್ಯಾಲಿಯಾಗಿದ್ದು ಶನಿವಾರ ಸಂಜೆ 7-30ಕ್ಕೆ ಮೂಡಿಗೆರೆಯ ಕಾಫಿ ಕೋರ್ಟ್ ತಲುಪಿ ಭೋಜನ ವಿರಾಮದ ನಂತರ 8-30ಕ್ಕೆ ಪುನಃ ಆರಂಭವಾಗಿ ರಾತ್ರಿ 10-30ರ ಸುಮಾರಿಗೆ ಚಿಕ್ಕಮಗಳೂರು ತಲುಪಿತು. ರ‍್ಯಾಲಿಯಲ್ಲಿ ಗೌಪ್ಯ ಚೆಕ್ ಪಾಯಿಂಟ್ಗಳಿವೆ. ವಿವಿಧ ವಿಭಾಗಗಳಲ್ಲಿ 40ಸ್ಪರ್ಧಿಗಳು ಭಾಗವಹಿಸಿದ್ದಾರೆ ಎಂದು ಚಿಕ್ಕಮಗಳೂರು ದಿ ಮೋಟರ್ ಸ್ಫೋಟ್ಸ್ ಕ್ಲಬ್ ಅಧ್ಯಕ್ಷ ಜಯಂತ್ ಪೈ ಮಾಹಿತಿ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಚ್.ಅಕ್ಷಯ್, ಸಿಇಒ ಜಿ ಪ್ರಭು, ಕ್ಲಬ್ ಉಪಾಧ್ಯಕ್ಷ ಫಾರೂಕ್ ಅಹಮದ್, ಜಂಟಿ ಕಾರ್ಯದರ್ಶಿ ಅಭಿಜಿತ್ ಪೈ, ಕಾರ್ಯಕ್ರಮ ಆಯೋಜಕ ದಿಲೀಪ್ ಸದಸ್ಯ ದಿವಿನ್ ಮತ್ತಿತರರು ಇದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button