ದಾವಣಗೆರೆ

ಏನಾಗುತ್ತದೋ ಏನೋ ನೋಡೋಣ ಎಂದ ಶಾಮನೂರು

ದಾವಣಗೆರೆ: ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಸ್ಥಾನ ಇದೆ. ಮತ್ತೇನು ನನಗೆ ಬೇಕು. ಜುಲೈ 25ರ ಮಧ್ಯಾಹ್ನ ಏನಾಗುತ್ತೋ ನೋಡೋಣ ಎಂದು ಕಾಂಗ್ರೆಸ್ ಹಿರಿಯ ಶಾಸಕರೂ ಆದ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.

ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬಿಜೆಪಿ ಪಕ್ಷದ ವರಿಷ್ಠರಿಂದ ಯಾವ ಆದೇಶ ಬರುತ್ತೋ ಗೊತ್ತಿಲ್ಲ. ಅವ್ರೇ ಹೇಳಿದ್ದಾರೆ. ಏನಾಗುತ್ತೋ ಏನೋ ಗೊತ್ತಿಲ್ಲ ಎಂಬುದಾಗಿ ಯಡಿಯೂರಪ್ಪ ಅವರೇ ಮಾತನಾಡಿದ್ದಾರೆ. ವೀರಶೈವ ಸಮುದಾಯ ಬಿಎಸ್ ವೈ ಅವರಿಗೆ ಬೆಂಬಲ ಸೂಚಿಸಿದೆ ಎಂದು ಹೇಳಿದ್ದಾರೆ.

ವೀರಶೈವ ಸಮುದಾಯದ ಪರ ನಾವು ಯಡಿಯೂರಪ್ಪರ ಪರ ಇದ್ದೇವೆ. ಏನಾಗಿದೆ ಎಂಬುದು ಜುಲೈ 25 ಕ್ಕೆ ಗೊತ್ತಾಗಲಿದೆ. ಬಿಜೆಪಿ ಹೈಕಮಾಂಡ್ ನಿರ್ಧಾರ ಮಾಡುತ್ತೆ. ಅದರ ಬಗ್ಗೆ ಹೆಚ್ಚು ಮಾತನಾಡಲ್ಲ ಎಂದಿದ್ದಾರೆ.

ಮಾಧ್ಯಮದವರಿಗೆ ಸಮಾಧಾನ ಇರಲಿ‌. ಯಾರು ಬರುತ್ತಾರೆ, ಯಾರು ಬರಲ್ಲ ಎಂದು ನೀವೇ ಹೇಳ್ತೀರಾ. ನನಗೆ ವಯಸ್ಸಿಲ್ಲ. ಮುಖ್ಯಮಂತ್ರಿ ಸ್ಥಾನವೂ ಬೇಡ. ಕೆಪಿಸಿಸಿ ಅಧ್ಯಕ್ಷ ಸ್ಥಾನವೂ ಬೇಡ ಎಂದು ಹೇಳಿದರು.

Spread the love

Related Articles

Leave a Reply

Your email address will not be published. Required fields are marked *

Back to top button