ದಕ್ಷಿಣ ಕನ್ನಡ
ಅಪಘಾತ: ಲಾರಿ ರಿಪೇರಿ ಮಾಡುತ್ತಿದ್ದ ಇಬ್ಬರು ಸ್ಥಳದಲ್ಲೇ ಸಾವು

ಮಂಗಳೂರು: ತಾಂತ್ರಿಕ ದೋಷದಿಂದ ನಿಲುಗಡೆಗೊಂಡಿದ್ದ ಲಾರಿಯನ್ನು ರಿಪೇರಿ ಮಾಡುತ್ತಿದ್ದ ಮೆಕಾನಿಕ್ ಗಳ ಮೇಲೆ ಬೊಲೆರೋ ಪಿಕಪ್ ವಾಹನ ಢಿಕ್ಕಿಯಾಗಿ, ಇಬ್ಬರು ಮೆಕ್ಯಾನಿಕ್ ಗಳು ಸ್ಥಳದಲ್ಲೇ ಮೃತಪಟ್ಟು ಮತ್ತೋರ್ವ ಗಂಭೀರ ಗಾಯಗೊಂಡಿರುವ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಉಪ್ಪಿನಂಗಡಿ ಸಮೀಪದ ಬೆದ್ರೋಡಿ ಎಂಬಲ್ಲಿ ನಡೆದಿದೆ.

ರಸ್ತೆಬದಿ ಕೆಟ್ಟುನಿಂತಿದ್ದ ಆಂಧ್ರಪ್ರದೇಶದ ಲಾರಿಯನ್ನು ಮೂವರು ಮೆಕಾನಿಕ್ ಗಳು ರಿಪೇರಿ ಮಾಡುತ್ತಿದ್ದ ವೇಳೆ ಬೊಲೆರೋ ಪಿಕಪ್ ಚಾಲಕನ ನಿಯಂತ್ರಣ ತಪ್ಪಿ ಢಿಕ್ಕಿ ಹೊಡೆದಿದ್ದು, ಇಬ್ಬರು ಆಂಧ್ರಪ್ರದೇಶ ಮೂಲದ ಮೆಕಾನಿಕ್ ಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೋರ್ವ ಗಂಭೀರ ಗಾಯಗೊಂಡಿದ್ದಾರೆ. ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




