ಬಾಗಲಕೋಟೆ
ಜಮಖಂಡಿಯ ಶೂರ್ಪಾಲಿಯಲ್ಲಿ ಸರಣಿ ಕಳ್ಳತನ; ದೇಗುಲ, ಬ್ಯಾಂಕ್ ದರೋಡೆಗೆ ವಿಫಲ ಯತ್ನ

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಶೂರ್ಪಾಲಿ ಗ್ರಾಮದಲ್ಲಿ ನಿನ್ನೆ ತಡರಾತ್ರಿ ಸರಣಿ ಕಳ್ಳತನ ನಡೆದಿದ್ದು, ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ.
ನಿನ್ನೆ ತಡರಾತ್ರಿ 1ಘಂಟೆಯಿಂದ 2 ಗಂಟೆ ವೇಳೆ ಕಳ್ಳರು ಕೈಚಳಕ ತೋರಿದ್ದು.ಬಸಪ್ಪ ಕುಂಚನೂರ್ ಅವರ ಮನೆ ಬೀಗ ಮುರಿದು, 200 ಗ್ರಾಂ ಚಿನ್ನ, ನಗದು ದೋಚಿ ಪರಾರಿಯಾಗಿದ್ದಾರೆ.ಗ್ರಾಮದ ಪ್ರಸಿದ್ಧ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಕಳ್ಳತನದ ವಿಫಲ ಯತ್ನವಾಗಿದೆ.
ಮನೆಯಲ್ಲಿ ಯಾರೂ ಇಲ್ಲದ ವೇಳೆ ಆರು ಜನರ ತಂಡ ರಾತ್ರೋ ರಾತ್ರಿ ಬೀಗ ಮುರಿದು ಕಳ್ಳತನ ಮಾಡಿದ್ದು.ಗ್ರಾಮದ ಪಿಕೆಪಿಎಸ್ ಬ್ಯಾಂಕ್ ಕಳ್ಳತನ ಮಾಡಲು ಯತ್ನಿಸಿದ್ದಾರೆ.9 ಸ್ಥಳಗಳಲ್ಲಿ ಕಳ್ಳತನಕ್ಕೆ ಪ್ರಯತ್ನಿಸಿದ್ದು, 6ಮನೆ, ಮಹಾಲಕ್ಷ್ಮಿ ದೇವಸ್ಥಾನ, ರಾಘವೇಂದ್ರ ಮಠ, ಚಿನ್ನದ ಅಂಗಡಿ ಸೇರಿದಂತೆ 9 ಕಡೆ ಕಳ್ಳತನಕ್ಕೆ ಪ್ರಯತ್ನಿಸಿದ್ದು. ಬಸಪ್ಪ ಕುಂಚನೂರ್ ಅವರ ಮನೆ ಕಳ್ಳತನ ಮಾಡುವಲ್ಲಿ ಯಶಸ್ಬಿಯಾಗಿದ್ದಾರೆ. ಸ್ಥಳಕ್ಕೆ ಸಾವಳಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.




