ಜಿಲ್ಲಾ ಸುದ್ದಿಬೆಳಗಾವಿ

Crime News: ಮಾಲೀಕನಿಂದಲೇ ಮಹಿಳೆ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಬೆಳಗಾವಿ : ತೋಟದ ಕೆಲಸಕ್ಕೆಂದು ಬಂದಿದ್ದ ಮಹಿಳೆಯ ಮೇಲೆಯೇ ಮಾಲೀಕ ಅತ್ಯಾಚಾರವೆಸಗಿರುವ ಘಟನೆ ಬೆಳಗಾವಿ ಜಿಲ್ಲೆ ಗೋಕಾಕ್ ನಲ್ಲಿ ಬೆಳಕಿಗೆ ಬಂದಿದೆ.

ಸೆ.17ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ತೋಟದ ಕೆಲಸಕ್ಕೆಂದು ಬಂದಿದ್ದ ಸಂತ್ರಸ್ತೆ ಮಹಿಳೆ ಕುಟುಂಬ ಆರೋಪಿ ಮಾಲೀಕನ ಮನೆಯ ಎದುರು ಶೆಡ್ ನಿರ್ಮಿಸಿಕೊಂಡು ವಾಸವಾಗುತ್ತಿತ್ತು.

ಸೆ.17 ರಂದು ಮಹಿಳೆಯ ಪತಿ ಹೊರಗೆ ಹೋಗಿದ್ದಾಗ ರಾತ್ರಿ ಶೆಡ್ ಬಳಿ ತನ್ನ ಸಹಚರರೊಂದಿಗೆ ಬಂದ ಮಾಲೀಕ, ಶೆಡ್ ಸುತ್ತ ತನ್ನ ಸಹಚರರನ್ನು ಕಾವಲಿರಿಸಿ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದಾನೆ. ಮಹಿಳೆಯ 5 ವರ್ಷದ ಬಾಲಕನ ಮೇಲೆ ಆರೋಪಿ ಹಲ್ಲೆ ನಡೆಸಿದ್ದಾನೆ ಎಂದು ತಿಳಿದು ಬಂದಿದೆ. ಅಲ್ಲದೇ ಅತ್ಯಾಚಾರ ಕೃತ್ಯದ ಬಗ್ಗೆ ಬಾಯ್ಬಿಡದಂತೆ ಜೀವ ಬೆದರಿಕೆಯೊಡ್ಡಿದ್ದಾನೆ.

ಪತಿ ಮನೆಗೆ ಬರುತ್ತಿದ್ದಂತೆ ಸಂತ್ರಸ್ತ ಮಹಿಳೆ ಗೋಕಾಕ್ ಠಾಣೆಯಲ್ಲಿ ದೂರು ನೀಡಿದ್ದು, ಇದೀಗ ಪೊಲಿಸರು ಆರೋಪಿ ಮಾಲೀಕನನ್ನು ಬಂಧಿಸಿ ತನಿಖೆಯನ್ನ ಮುಂದುವರೆಸಿದ್ದಾರೆ

Spread the love

Related Articles

Leave a Reply

Your email address will not be published. Required fields are marked *

Back to top button