ಜಿಲ್ಲಾ ಸುದ್ದಿಬೆಳಗಾವಿ
ಹಸುಗೂಸಿನೊಂದಿಗೆ ಬಾವಿಗೆ ಹಾರಿ ಗೃಹಣಿ ಆತ್ಮಹತ್ಯೆ

ಬೆಳಗಾವಿ : ಕೌಟುಂಬಿಕ ಕಲಹಕ್ಕೆ ಬೇಸತ್ತು ಗ್ರಹಿಣಿಯೊಬ್ಬಳು ತನ್ನ 11 ತಿಂಗಳ ಮಗುವಿನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಮಣ್ಣೀಕೇರಿ ಗ್ರಾಮದಲ್ಲಿ ನಡೆದಿದೆ.
ದಂಪತಿಗಳಿಬ್ಬರ ಭಿನ್ನಾಭಿಪ್ರಾಯ ಹಾಗೂ ಕೌಟುಂಬಿಕ ಕಲಹಕ್ಕೆ ಬೇಸತ್ತು, ಗ್ರಹಿಣಿಯೊಬ್ಬಳು ತನ್ನ 11 ತಿಂಗಳ ಮಗುವಿನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇಂದು ಮುಂಜಾನೆ 11 .30 ಘಂಟೆ ಸುಮಾರಿಗೆ ಗ್ರಾಮದ ಹೊರವಲಯದಲ್ಲಿ ಈ ಘಟನೆ ನಡೆದಿದೆ.
ಕಲ್ಪನಾ ಮೋಹನ್ ಗುಡಾಜೀ (21) ಎಂಬ ಮಹಿಳಿಯೇ ಆತ್ಮಹತ್ಯೆಗೆ ಶರಣಾದ ಯುವತಿಯಾಗಿದ್ದಾಳೆ. ಎರಡು ವರ್ಷದ ಹಿಂದಷ್ಟೇ ಈ ಮಹಿಳೆಗೆ ಮದುವೆಯಾಗಿತ್ತು. ಈಕೆಗೆ 11 ತಿಂಗಳ ಮಗು ಇತ್ತು. ಕಲ್ಪನಾ ಮಗಳು ಭೂಮಿಕಾಳೊಂಗಿಗೆ ಭಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಸುದ್ದಿ ತಿಳಿಯುತ್ತಿದಂತೆ ಸ್ಥಳಕ್ಕೆ ಕಾಕತಿ ಪಿಎಸ್ಐ ಅವಿನಾಶ ಯರಗೊಪ್ಪ ಹಾಗೂ ಸಿಬ್ಬಂದಿ ಧಾವಿಸಿ ತನಿಖೆ ಕೈಕೊಂಡಿದ್ದಾರೆ. ಆತ್ಮಹತ್ಯೆಗೆ ಬಗ್ಗೆ ಹಲವು ಗುಮಾನಿಗಳಿದ್ದು ಪೊಲೀಸ್ ತನಿಖೆಯಿಂದ ನಂತರವೇ ನಿಜಾಂಶ ಹೊರಬೀಳಲಿದೆ.




