ಹುಬ್ಬಳ್ಳಿಯಲ್ಲಿ ದಾಯಾದಿಗಳ ಕಲಹ; ಎಳೆ ನೀರು ಕೊಚ್ಚುವ ಮಚ್ಚಿನಿಂದ ಹಲ್ಲೆ

ಧಾರವಾಡ : ಇಷ್ಟು ದಿನ ತಣ್ಣಗಿದ್ದ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಮತ್ತೇ ಮಾರಕಾಸ್ತ್ರಗಳು ಸದ್ದು ಮಾಡಿದ್ದು, ವ್ಯಕ್ತಿಯೊಬ್ಬ ತನ್ನ ಚಿಕ್ಕಪ್ಪನ ಮಗನಿಗೆ ಮಚ್ಚಿನಿಂದ ಹೊಡೆದು ಹಲ್ಲೆ ಮಾಡಿರುವ ಘಟನೆ ಹುಬ್ಬಳ್ಳಿಯ ಗಾರ್ಡನ್ ಪೇಟೆಯ ನ್ಯೂ ಇಂಗ್ಲೀಷ್ ಸ್ಕೂಲ್ ಹತ್ತಿರ ನಡೆದಿದೆ.
ನಗರದ ಗಾರ್ಡನ್ ಪೇಟೆ ನಿವಾಸಿ ಮಹ್ಮದ್ ಸಾದಿಕ್ ಬಿಕ್ಕನಬಾವಿ ಹಲ್ಲೆಗೆ ಒಳಗಾದ ವ್ಯಕ್ತಿ ಎಂದು ಗುರುತಿಸಲಾಗಿದ್ದು, ಇನ್ನೂ ಹಲ್ಲೆ ಮಾಡಿದ ವ್ಯಕ್ತಿಯು ಹಲ್ಲೆಗೆ ಒಳಗಾದ ವ್ಯಕ್ತಿಯ ಚಿಕ್ಕಪ್ಪನ ಮಗ ಸೈಯ್ಯದ್ ಎಂದು ಹೇಳಲಾಗುತ್ತಿದೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಇಬ್ಬರು ದಾಯಾದಿಗಳ ನಡುವೆ ಗಲಾಟೆ ನಡೆದಿತ್ತು, ಈ ವೇಳೆ ಏಳನೀರು ಕೊಚ್ಚು ಮಚ್ಚಿನಿಂದ ಸೈಯ್ಯದ, ಮಹ್ಮದ್ ಸಾಧಿಕ್ನ ಮೇಲೆ ಹಲ್ಲೆ ಮಾಡಿದ್ದಾನಂತೆ. ಇದರಿಂದಾಗಿ ಮಹ್ಮದ್ ಸಾಧಿಕ್ನ ಒಂದು ಬೆರಳು ಕಟ್ಟಾಗಿದ್ದು, ತಲೆಯ ಭಾಗಕ್ಕೆ ತೀವ್ರವಾದ ಗಾಯವಾಗಿದೆ ಎಂದು ಹೇಳಲಾಗುತ್ತಿದೆ.
ಇನ್ನೂ ಘಟನೆ ನಡೆಯುತ್ತಿದಂತೆ ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಹಲ್ಲೆಗೆ ಒಳಗಾದ ಸಾಧಿಕ್ನನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನಿ ಮಾಡಿ, ಪೊಲೀಸರು ಪರಿಶೀಲನೆ ಕೈಗೊಂಡಿದ್ದಾರೆ. ಈ ಕುರಿತು ಘಂಟಿಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




