ರೈತ ವಿರೋಧಿ ಕಾಯ್ದೆ ವಿರೋಧಿಸಿ ಭಾರತ್ ಬಂದ್ ಗೆ ಬೆಂಬಲ: ಎಂಎಲ್ಸಿ ಆರ್ ಬಿ ತಿಮ್ಮಾಪುರ

ಬಾಗಲಕೋಟೆ: ಕೇಂದ್ರ ಸರ್ಕಾರ ರೈತರಿಗೆ ಹಾನಿಕಾರಕ ಮೂರು ಕೃಷಿ ಕಾಯ್ದೆಗಳನ್ನು ಜಾರಿಗೆ ತರಲು ಹೊರಟಿದೆ. ಅದನ್ನು ವಿರೋಧಿಸಿ ನಾಳೆ ಭಾರತ್ ಬಂದ್ ನಡೆಯಲಿದ್ದು, ಇದನ್ನು ಬೆಂಬಲಿಸಿ ಹೋರಾಟದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮುಖಂಡರು ಭಾಗಿಯಾಗಬೇಕು ಎಂದು ವಿಧಾನಪರಿಷತ್ ಸದಸ್ಯ ಆರ್ ಬಿ ತಿಮ್ಮಾಪುರ ಮನವಿ ಮಾಡಿದರು.
ಬಾಗಲಕೋಟೆ ಜಿಲ್ಲೆ ಮುಧೋಳದಲ್ಲಿ ಮಾತನಾಡಿದ ಅವರು, ವಿದ್ಯುತ್ ಖಾಸಗಿಕರಣ ನಿಲ್ಲಿಸಬೇಕು, ಕಬ್ಬಿನ ಎಫ್ ಆರ್ ಪಿ ಧರ ಪುನರ್ ಪರಿಶೀಲಿಸಬೇಕು ಜನಸಾಮಾನ್ಯರ ಆಡುಗೆ ಅನಿಲ ಡೀಸೆಲ್, ಪೆಟ್ರೋಲ್ ದರ ಇಳಿಸಬೇಕು ಎಂದು ಒತ್ತಾಯಿಸಿ ನಾಳಿನ ಭಾರತ ಬಂದಗೆ ನಮ್ಮ ಸಂಪೂರ್ಣವಾದ ಬೆಂಬಲವಿದ್ದು ಮುಧೋಳ ಮತಕ್ಷೇತ್ರದ ಎಲ್ಲಾ ಗ್ರಾಮದ ನಮ್ಮ ಕಾಂಗ್ರೆಸ್ ಪಕ್ಷದ ಹಿರಿಯರು, ಮುಖಂಡರು, ನಾಯಕರು, ಯುವ ನಾಯಕರು ಹಾಗೂ ಕಾರ್ಯಕರ್ತರು ಭಾಗಿಯಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಆರ್ ಬಿ ತಿಮ್ಮಾಪುರ್ ಹೇಳಿದರು.
ಬೆಲೆಯೆರಿಕೆ ವಿರುದ್ಧ ಮೂರನೆ ಯುದ್ಧ ನಡೆಯುತ್ತಿದೆ. ರೈತರಿಗೆ ಹಾನಿಕಾರಕ ಕಾಯ್ದೆ ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿದೆ.ಇವತ್ತು ರೈತರು, ಸಾಮಾನ್ಯ ಜನರು ಜೀವನ ನಡೆಸುವುದು ಕಷ್ಟಕರವಾಗಿದೆ.ಇದನ್ನೆಲ್ಲಾ ಬದಿಗೊತ್ತಿ ಕೇಂದ್ರ ಸರ್ಕಾರ ಕಾಯ್ದೆ ಜಾರಿಗೆ ಹೊರಟಿದೆ. ಇದನ್ನು ವಿರೋಧಿಸಿ ರೈತ ಸಂಘಟನೆಗಳು ಕರೆ ನೀಡಿರೋ ಭಾರತ್ ಬಂದ್ ಗೆ ಎಐಸಿಸಿ, ಕೆಪಿಸಿಸಿ ಕಾಂಗ್ರೆಸ್ ಘಟಕ ಬೆಂಬಲಿಸಿದೆ ಎಂದರು.




