ಜಿಲ್ಲಾ ಸುದ್ದಿರಾಜಕೀಯರಾಮನಗರ

ಬಿಟ್ ಕಾಯಿನ್ ವಿಚಾರ ತನಿಖೆ ಪ್ರತಿಪಕ್ಷದವರು ಸಾಕ್ಷಿ ನೀಡಲಿ: ಸಚಿವ ಅಶ್ವಥ್ ನಾರಾಯಣ್

ರಾಮನಗರ: ನಮ್ಮ ಸರ್ಕಾರದಲ್ಲಿ ಈ ಬಗ್ಗೆ ತನಿಖೆ ಮಾಡಿಸಲು ಸಿದ್ಧರಿದ್ದಾರೆ. ಈಗಾಗಲೇ ಸೆಂಟ್ರಲ್ ಏಜೆನ್ಸಿಗಳ ಮೂಲಕ ತನಿಖೆ ಮಾಡಿಸಲು ಸಿಎಂ ಸಿದ್ಧರಿದ್ದಾರೆ. ಪ್ರತಿಪಕ್ಷದವರು ಏನಾದರೂ ಸಾಕ್ಷಿ ಇದ್ದರೆ ಮಂಡಿಸಲಿ. ಏನಾದರೂ ಪುರಾವೆ ಇದ್ದರೆ ನೀಡಲಿ, ಹಂಚಿಕೊಳ್ಳಿ, ಸರ್ಕಾರಕ್ಕೂ ಕೊಡಿ ಎಂದು ಸಚಿವ ಡಾ.ಅಶ್ವಥ್ ನಾರಾಯಣ್ ಮನವಿ ಮಾಡಕೊಂಡಿದ್ದಾರೆ.

ಜಿಲ್ಲೆಯ ಮಾಗಡಿಯಲ್ಲಿ ಮಾತನಾಡಿದ ಅವರು, ಬಿಟ್ ಕಾಯಿನ್ ವಿಚಾರವಾಗಿ ವಿಚಾರಣೆ ನಡೆಯಬೇಕಾದರೆ ಏನು ಹೇಳಲು ಸಾಧ್ಯ. ಅವರು ಅಧಿಕಾರದಲ್ಲಿ ಇದ್ದರೂ ಆಗ ಪ್ರಕರಣಗಳ ತನಿಖೆ ನಡೆಯಬೇಕಾದರೆ ಯಾವ್ಯಾವ ಮಾಹಿತಿ ಹೇಳಿದ್ದಾರೆ, ಹೇಳಬೇಕು ಅವರು. ಅರ್ಕಾವತಿ ವಿಚಾರದಲ್ಲಿ ಕೆಂಪಣ್ಣ ಆಯೋಗದ ತನಿಖೆ ಬಗ್ಗೆ ಏನಾದರೂ ಹೇಳಿದ್ರಾ. ಪಬ್ಲಿಕ್ ಪ್ರಾಸಿಕ್ಯೂಟರ್ ಅಪೈಟ್ಮೆಂಟ್ ನಲ್ಲಿ ಉಲ್ಲಂಘನೆಯಾಗಿತ್ತು ಅದರಲ್ಲಿ ಏನಾದರೂ ಹೇಳಿದ್ರಾ. ನಮ್ಮ ಪ್ರತಿಪಕ್ಷದ ನಾಯಕರ ಮೇಲೆ ಹಲವು ಆರೋಪಗಳಿವೆ ಎಂದರು.

ಹಾಗೆಯೇ ಬಿಟ್ ಕಾಯಿನ್ ವಿಚಾರದಲ್ಲಿ ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಈ ರೀತಿಯ ಬೆಳವಣಿಗೆ ಯಾವುದು ಇಲ್ಲ, ಯಾವುದು ಸತ್ಯ ಅಲ್ಲ. ಸಿಎಂ – ಪಿಎಂ ಭೇಟಿ ವಿಚಾರ ಬೇರೆ ಕಾರಣಗಳಿವೆ. ಕೆಲ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚೆ ಮಾಡಲು ಭೇಟಿ ಮಾಡ್ತಿದ್ದಾರೆ. ಪ್ರತಿಪಕ್ಷದವರ ಎಲ್ಲಾ ಟೀಕೆಗೆ ಎಲ್ಲಾ ತಿರುಗೇಟು ಕೊಡ್ತೇವೆ. ಅವರಿಗೆ ಕನ್ನಡಿ ಇಡಿಯುವಂತಹ ಕೆಲಸ ಮಾಡ್ತೇವೆ. ಅವರ ಘನಸಾಧನೆಗಳನ್ನ ಬಹಳಷ್ಟು ಪರಿಣಾಮಕಾರಿಯಾಗಿ ತಿಳಿಸುವ ಕೆಲಸ ಮಾಡ್ತೇವೆ ಎಂದರು.

ಯಾವುದೇ ಪ್ರಕರಣದಲ್ಲಿ ಮುಚ್ಚುಮರೆ ಮಾಡುವುದು ಯಾವುದು ಇಲ್ಲ. ಎಲ್ಲಾ ರೀತಿಯ ತನಿಖೆಗೆ ನಾವು ಸಿದ್ಧರಿದ್ದೇವೆ. ಕಾನೂನು ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮವಹಿಸಲಾಗಿದೆ. ಮುಂದೆಯೂ ಸಹ ಅಂತಹವರ ವಿರುದ್ಧ ಕಾನೂನಿನ ಕ್ರಮವಹಿಸಲಾಗುತ್ತದೆ ಎಂದು ಇದೇ ವೇಳೆ ಡಾ. ಅಶ್ವಥ್ ನಾರಾಯಣ್ ತಿಳಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button