ಚಿಕ್ಕಮಗಳೂರು
ಕೇರಳದಲ್ಲಿ ʼಝೀಕಾʼ ವೈರಸ್ ಪತ್ತೆ; ರಾಜ್ಯದಲ್ಲೂ ಕಟ್ಟೆಚ್ಚರ

ಚಿಕ್ಕಮಗಳೂರು: ಈಡಿಸ್ ಸೊಳ್ಳೆಯಿಂದ ಹರಡುವ ಝೀಕಾ ವೈರಸ್ ಕೇರಳದಲ್ಲಿ ಪತ್ತೆಯಾಗಿದ್ದು, ಕರ್ನಾಟಕದ ಗಡಿಭಾಗದ ಜಿಲ್ಲೆಗಳಾದ ಚಾಮರಾಜನಗರ, ದ.ಕ., ಹಾಗೂ ಉಡುಪಿಯಲ್ಲಿ ಕಟ್ಟೆಚ್ಚರ ವಹಿಸುವಂತೆ ರಾಜ್ಯ ಆರೋಗ್ಯ ಇಲಾಖೆ ಸೂಚಿಸಿದೆ.
ಮಳೆಗಾಲದ ಅವಧಿಯಲ್ಲಿ ಈಡಿಸ್ ಸೊಳ್ಳೆಯ ಕಾಟ ಹೆಚ್ಚಾಗುವುದರಿಂದ ಝೀಕಾ ವೈರಸ್ ನಿಯಂತ್ರಣಕ್ಕೆ ರಾಜ್ಯದಲ್ಲಿ ನಿಗಾ ವಹಿಸಲು ಸೂಚಿಸಲಾಗಿದೆ.




