ಚಿಕ್ಕಮಗಳೂರು
ಬೀಗ ಮುರಿದು ಮನೆಯೊಳಗಿದ್ದ ನಗದು, ಚಿನ್ನ ಕಳವು

ಚಿಕ್ಕಮಗಳೂರು: ಮೂಡಿಗೆರೆ ಪಟ್ಟಣದ ಸನ್ನಿಧಿ ಬಡಾವಣೆಯಲ್ಲಿ ಮನೆಯೊಂದರ ಹಿಂಬಾಗಿಲಿನ ಲಾಕ್ ಮುರಿದು ಒಳಗಿದ್ದ 2.50 ಲಕ್ಷ ಹಣ ಹಾಗೂ 30 ಸಾವಿರ ಬೆಲೆಬಾಳುವ ಆಭರಣವನ್ನು ಕಳವು ಮಾಡಿರುವುದು ಬೆಳಕಿಗೆ ಬಂದಿದೆ.
ಇಲ್ಲಿನ ನಿವಾಸಿ ಅರವಿಂದ ಎಂಬುವರ ಮನೆಗೆ ಕಳ್ಳರು ನುಗ್ಗಿದ್ದಾರೆ. ಮನೆಗೆ ಬೀಗ ಹಾಕಿ ಪತ್ನಿಯ ತಮ್ಮನ ಮದುವೆಗೆಂದು ಎರಡು ದಿನಗಳ ಹಿಂದೆ ಬೆಂಗಳೂರಿಗ ಹೋಗಿ ವಾಪಸ್ ಮನೆಗೆ ಬಂದು ನೋಡಿದಾಗ ಕಳ್ಳತನವಾಗಿರುವುದು ತಿಳಿದಿದೆ. ಸ್ಥಳೀಯ ಠಾಣೆಗೆ ದೂರು ನೀಡಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ., ಆರೋಪಿ ಪತ್ತೆಗೆ ಬಲೆ ಬೀಸಲಾಗಿದೆ.




