Breaking Newsಬಾಗಲಕೋಟೆರಾಜಕೀಯರಾಜ್ಯ

ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ಪಾದಯಾತ್ರೆ ವಿಚಾರ; ಜಲಸಂಪನ್ಮೂಲ ಸಚಿವ ಕಾರಜೋಳ ವ್ಯಂಗ್ಯ

ಬಾಗಲಕೋಟೆ: ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ಪಾದಯಾತ್ರೆ ಮಾಡುತ್ತೆ ಎನ್ನುವ ವಿಚಾರಕ್ಕೆ ಬಾಗಲಕೋಟೆಯಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್ ಯಾವಾಗ ಯಾವಾಗ ಅಧಿಕಾರ ಕಳೆದುಕೊಂಡು ಮನೆಯಲ್ಲಿ ಇರ್ತಾರೆ.ಆಗ ನಿರುದ್ಯೋಗಿಗಳಾದಾಗ ಪಾದಯಾತ್ರೆ ಮಾಡುತ್ತಾರೆ.ನಿರುದ್ಯೋಗಿಗಳು ಆದಾಗೊಮ್ಮೆ ಪಾದಯಾತ್ರೆ ಮಾಡುತ್ತಾರೆ ಎಂದಿದ್ದಾರೆ.

ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೃಷ್ಣಾ ಮೇಲ್ದಂಡೆ ಯೋಜನೆ ಬಗ್ಗೆ ೨೦೧೨-೧೩ ರಲ್ಲಿ ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಎಂದು ಮಾಡಿದ್ರು. ಹೊಸಪೇಟೆಯಿಂದ ಕೂಡಲಸಂಗಮ ವರೆಗೆ ಪಾದಯಾತ್ರೆ ಮಾಡಿ. ಐದು ವರ್ಷಗಳಲ್ಲಿ ಪ್ರತಿವರ್ಷ 10 ಸಾವಿರ ಕೋಟಿ ರೂಪಾಯಿ ಕೋಡುತ್ತೇವೆ.ಐದು ವರ್ಷಗಳಲ್ಲಿ 50 ಸಾವಿರ ಕೋಟಿ ನೀಡಿ ಯೋಜನೆ ಪೂರ್ಣ ಮಾಡ್ತೀವಿ ಅಂದಿದ್ರು. ಏನ್ ಮಾಡಿದ್ರು? ಎಂದು ಪ್ರಶ್ನಿಸಿದ್ದಾರೆ.

ಇಂಧನ ದರ ಇಳಿಕೆ ಬಗ್ಗೆ ಕಾಂಗ್ರೆಸ್ ವ್ಯಂಗ್ಯಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನವರಿಗೆ 75 ವರ್ಷಗಳ ಆಡಳಿತದಲ್ಲಿ ಅವ್ರ ಸಾಧನೆ ಶೂನ್ಯ. ಏನಾದ್ರೂ ಸಾಧನೆ ಮಾಡಿದ್ದೀವಿ ಅಂತ ಹೇಳೋದಕ್ಕೆ ಅವ್ರಲ್ಲಿ ಏನೂ ಇಲ್ಲ. ಸಾಧನೆ ಮಾಡದೇ ಇರೋದ್ರಿಂದ.ಪದೇ ಪದೇ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಅದು ಸತ್ಯಕ್ಕೆ ದೂರವಾದಂತಹದ್ದು, ಅದ್ರಲ್ಲಿ ಯಾವುದೇ ಹುರುಳಿಲ್ಲ. ಕಾಂಗ್ರೆಸ್ ನವರು ಈ ರೀತಿ ಗಿಮಿಕ್ ಮಾಡಿದ್ರಿಂದಲೇ.ದೇಶದಲ್ಲಿ 26 ರಾಜ್ಯಗಲ್ಲಿ ಕಾಂಗ್ರೆಸ್ ಮುಕ್ತ ಆಗಿದೆ.ಮುಂದಿನ ಚುನಾವಣೆಯಲ್ಲಿ ಇನ್ನುಳಿದ ಒಂದೆರಡು ರಾಜ್ಯಗಳಲ್ಲೂ ಕಾಂಗ್ರೆಸ್ ಮುಕ್ತ ಆಗುತ್ತೆ ಎಂದರು.

Spread the love

Related Articles

Leave a Reply

Your email address will not be published. Required fields are marked *

Back to top button