ಚಿಕ್ಕಮಗಳೂರು
ಮೂಡಿಗೆರೆ ಶಾಸಕರ ಮನೆಗೆ ಅಕ್ರಮ ಮರಳು ಸಾಗಾಟ ಆರೋಪ

ಚಿಕ್ಕಮಗಳೂರು: ಶಾಸಕ ಎಂ ಪಿ ಕುಮಾರಸ್ವಾಮಿ ತಮ್ಮ ಮನೆ ನಿರ್ಮಾಣಕ್ಕೆ ಅಕ್ರಮವಾಗಿ ಮರಳು ಸಾಗಣೆ ಮಾಡಿಕೊಳ್ಳುತ್ತಿದ್ದಾರೆ ಗಂಭೀರ ಆರೋಪ ಕೇಳಿಬಂದಿದೆ.
ಮೂಡಿಗೆರೆ ತಾಲೂಕಿನ ಕೆಲ್ಲೂರು ಗ್ರಾಮದಲ್ಲಿ ಶಾಸಕ ಎಂ.ಪಿ ಕುಮಾರಸ್ವಾಮಿ ಮನೆ ನಿರ್ಮಾಣ ಮಾಡುತ್ತಿದ್ದು ಇದರ ನಿರ್ಮಾಣ ಕಾರ್ಯಕ್ಕೆ ವಾರದಲ್ಲಿ ಹತ್ತರಿಂದ ಹದಿನೈದು ಲೋಡ್ ಮರಳನ್ನು ಅಕ್ರಮವಾಗಿ ಸಾಗಣೆ ಮಾಡಲಾಗುತ್ತಿದೆ ಎಂದು ಸ್ಥಳೀಯ ಕಾಂಗ್ರೆಸ್ ಮುಖಂಡ ಚಂದ್ರು ಒಡೆಯರ್ ಆರೋಪಿಸಿದ್ದಾರೆ.
ಶಾಸಕರ ಮನೆಯ ಮಾರ್ಗದಲ್ಲಿ ಮರಳು ಸಾಗಿಸುತ್ತಿರುವ ಸ್ಥಳೀಯರು ವಿಡಿಯೋ ಮಾಡಿದ್ದಾರೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಹರಿದಾಡುತ್ತಾ ಸದ್ದು ಮಾಡತೊಡಗಿದೆ.




