ಚಿಕ್ಕಮಗಳೂರು

ಇಲಿ ಹಿಡಿದು ಗಣೇಶನಿಗೆ ಅರ್ಪಿಸಿದ ಭಕ್ತ; ಕಾರಣವೇನು ಗೊತ್ತೇ?

ಚಿಕ್ಕಮಗಳೂರು: ಗಣೇಶ ಹಬ್ಬವನ್ನು ವಿವಿಧ ಪೂಜೆ, ಪುನಸ್ಕಾರದೊಂದಿಗೆ ಆಚರಿಸುತ್ತಾ, ಹೂವು, ಹಣ್ಣು, ಎಳ್ಳುಂಡೆ, ಮೋದಕ ಇತ್ಯಾದಿಗಳನ್ನು ಅರ್ಪಿಸುವುದನ್ನು ಕಾಣುತ್ತೇವೆ. ಆದರೆ ಇಲ್ಲೊಬ್ಬ ಯುವಕ ಇಲಿಯೊಂದನ್ನು ಹಿಡಿದು ತಂದು ಗಣೇಶನಿಗೆ ಅರ್ಪಿಸಿದ ವಿಚಿತ್ರ ಘಟನೆ ನಡೆದಿದೆ!

ಮರ್ಕಲ್ ಗ್ರಾಮದ ಕೃಷಿ ಜಮೀನಿನ ಭಾಗದಲ್ಲಿ ಬೆಳೆಗಳಿಗೆ ವಿಪರೀತ ಇಲಿಗಳ ಕಾಟವಿದೆಯಂತೆ. ಕೃಷಿ ಚಟುವಟಿಕೆಗೆ ಇದರಿಂದ ತೊಡಕಾಗಿದ್ದು, ಬೆಳೆಗಳನ್ನು ಉಳಿಸಿಕೊಳ್ಳಲಾಗದೆ ಬೇಸತ್ತಿದ್ದ ಯುವಕ ನಿತಿನ್ ಈ ಬಾರಿ ಚೌತಿ ಹಬ್ಬಕ್ಕೆ ಇಲಿಯೊಂದನ್ನು ಹಿಡಿದು ತಂದು ಗಣೇಶನಿಗೆ ಅರ್ಪಿಸಿದ್ದಾನೆ. ಹಾಗೆಯೇ ಇಲಿಗಳಿಂದ ಬೆಳೆ ಹಾನಿಯಾಗುವುದನ್ನು ತಪ್ಪಿಸುವಂತೆ ಗಣೇಶನಲ್ಲಿ ಬೇಡಿಕೊಂಡು, ನೆರೆದಿದ್ದ ಭಕ್ತರನ್ನು ಆಶ್ಚರ್ಯಗೊಳಿಸಿದ್ದಾನೆ.

ಆದರೆ ಯುವಕ ತಂದು ಬಿಟ್ಟಿದ್ದ ಇಲಿಯು ಗಣೇಶನ ಬಳಿ ನಿಲ್ಲದೆ ತಕ್ಷಣ ಕಣ್ಮರೆಯಾಗಿದೆ!

Related Articles

Leave a Reply

Your email address will not be published. Required fields are marked *

Back to top button