ಬಾಗಲಕೋಟೆ

ಸರ್ಕಾರಿ ಶಾಲೆಗೆ ಬಣ್ಣ ಹಚ್ಚಿಸಿ ಚಂದಗೊಳಿಸಿದ ಹಳೇ ವಿದ್ಯಾರ್ಥಿಗಳು

ಬಾಗಲಕೋಟೆ: ತಾವು ಕಲಿತ ಶಾಲೆಗೆ ಅಂದವಾಗಿ ಬಣ್ಣ ಹಚ್ಚಿಸುವ ಮೂಲಕ ಸರ್ಕಾರಿ ಶಾಲೆಯನ್ನು ಹೈಟೆಕ್ ಗೊಳಿಸಿದ ಯುವಕರ ಕಾರ್ಯಕ್ಕೆ ಬಾಗಲಕೋಟೆಯಲ್ಲಿ ಸಾರ್ವಜನಿಕ ಮೆಚ್ಚುಗೆ ವ್ಯಕ್ತವಾಗಿದೆ.

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದಲ್ಲಿರುವ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಬಗ್ಗೆ ಅಪಾರ ಅಭಿಮಾನ ಹೊಂದಿರುವ ಸಂದೇಶ ಸೇವಾ ಅಭಿವೃದ್ಧಿ ಸಂಸ್ಥೆ, ಹಳೆಯ ವಿದ್ಯಾರ್ಥಿಗಳು ಶಿಕ್ಷಕರು ಸೇರಿ 4ಲಕ್ಷ ಸಂಗ್ರಹಿಸಿ ಆ ಹಣದಿಂದ ಶಾಲೆಗೆ ಹೊಸ ರೂಪ ನೀಡಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಕೋವಿಡ್ ಹಿನ್ನೆಲೆಯಲ್ಲಿ ಶಾಲೆಗಳು ಬಂದ್ ಆಗಿದ್ದವು. ಈಗ 6ನೇ ತರಗತಿಯಿಂದ ಸರಕಾರ ಶಾಲೆ ಆರಂಭಿಸಿದೆ. ಕೋವಿಡ್ ನಿಂದ ಶಾಲೆ ಬಂದ್ ಆಗಿದ್ದ ವೇಳೆ ಶಾಲಾ ಗೋಡೆಗಳು ಅಂದ ಕಳೆದುಕೊಂಡಿದ್ದವು. ಶಾಲಾರಂಭದ ವೇಳೆ ಗೋಡೆಗೆ ಕಲರ್ ಫುಲ್ ಆಗಿ ಗಮನ ಸೆಳೆಯುವುದನ್ನು ನೋಡಿ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರಿಗೆ ಖುಷಿಯಾಗಿದೆ‌. ಅಡುಗೆ ಕೋಣೆ, 10 ಶಾಲಾ ಕೊಠಡಿಗಳಿಗೆ ಬಣ್ಣ ಹಚ್ಚಲಾಗಿದೆ. ಶಾಲಾ ಕಾಂಪೌಂಡ್ ಮೇಲೆ ರಾಜ್ಯ ಜಿಲ್ಲೆಯ ನಕ್ಷೆ, ಐತಿಹಾಸಿಕ ತಾಣ, ಹಿತನುಡಿ ಗಳು, ಸ್ವಚ್ಛತೆ ಕುರಿತಾದ ನುಡಿಗಳನ್ನು ಬರೆಯಿಸುವ ಮೂಲಕ ವಿದ್ಯಾರ್ಥಿಗಳ ಜ್ಞಾನಾಭಿವೃದ್ಧಿಗೆ ಅನುಕೂಲ ಆಗಿದೆ.

ಶಾಲೆಯ ಆವರಣದಲ್ಲಿ ಬೆಳೆದಿದ್ದ ಮುಳ್ಳುಕಂಟಿಗಳನ್ನು ಸ್ವಚ್ಛಗೊಳಿಸಿದ್ದಾರೆ. ಜೊತೆಗೆ ಶಾಲಾ ಮೈದಾನ ಮದ್ಯಪಾನ, ಸಿಗರೇಟ್ ಗುಟ್ಕಾ ಸೇವನೆಯಂತಹ ದುಶ್ಚಟಕ್ಕೆ ಬಳಕೆಯಾಗುತ್ತಿದ್ದುದನ್ನು ಸಂಪೂರ್ಣವಾಗಿ ತಡೆದಿದ್ದಾರೆ. ಅಮೀನಗಡ ಪಟ್ಟಣದ ಸಂದೇಶ್ ಸೇವಾ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ಸಂಜಯ್ ಐಹೊಳೆ ಹಳೆ ವಿದ್ಯಾರ್ಥಿಗಳು ಸೇರಿ ಸರ್ಕಾರಿ ಶಾಲೆಗೆ ಅಂದಗೊಳಿಸಲು ಪಣತೊಟ್ಟಿರುವ ಬಗ್ಗೆ ಹೇಳುತ್ತಾರೆ. ನಮ್ಮೂರ ಶಾಲೆ ನಮ್ಮ ಶಾಲೆ ಎಂದುಕೊಂಡು ಶಾಲಾಭಿವೃದ್ಧಿಗೆ ಶ್ರಮಿಸಿದರೆ ಖಂಡಿತವಾಗಿಯೂ ಸರ್ಕಾರಿ ಶಾಲೆಗಳು ಖಾ‌ಸಗಿ ಶಾಲೆಗಳಗಿಂತ ಹೆಚ್ಚಾಗಿ ಬೆಳೆಯುತ್ತವೆ. ಉನ್ನತ ಹುದ್ದೆಯಲ್ಲಿರುವವರು ತಾವು ಕಲಿತ ಶಾಲೆಯ ಅಭಿವೃದ್ಧಿಗೆ ನೆರವಾದರೆ ಅಭಿವೃದ್ಧಿಸಾಧಿಸಲು ಸಾಧ್ಯ ಎನ್ನುವುದಕ್ಕೆ ಈ ಶಾಲೆಯೇ ಸಾಕ್ಷಿ

Spread the love

Related Articles

Leave a Reply

Your email address will not be published. Required fields are marked *

Back to top button