ಚಿಕ್ಕಮಗಳೂರು
ಬೈರಾಪುರ ಕಾಡಾನೆಗಳಿಂದ ಹಲವು ಗ್ರಾಮದ ರೈತರಿಗೆ ಸಂಕಷ್ಚ

ಚಿಕ್ಕಮಗಳೂರು: ಕಾಡಾನೆಗಳು ಊರುಬಗೆ ಹೊಸಳ್ಳಿಯಲ್ಲಿ ಬೀಡುಬಿಟ್ಟಿದ್ದು ಕಾಫಿ, ಏಲಕ್ಕಿ, ಬಾಳೆ, ಅಡಕೆ ಬೆಳೆ ಹಾಗೂ ನಾಟಿ ಮಾಡಿದ ಭತ್ತದ ಗದ್ದೆ ನಾಶಪಡಿಸಿವೆ.
ಯು ಹೊಸಳ್ಳಿ ಬೈರೇಗೌಡ ಮನೆ ಬಳಿಯ ತೋಟಕ್ಕೆ ದೌಡಾಯಿಸಿವೆ. ಪಕ್ಕದ ಬೈರಾಪುರ ಕಾಡಿನಿಂದ ಬಂದಿದ್ದು ಅರಣ್ಯ ಇಲಾಖೆಯವರು ದೂರದ ಕಾಡಿಗೆ ಸ್ಥಳಾಂತರಿಸಿ ಈ ಭಾಗದ ರೈತರಿಗೆ ಆಗುವ ತೊಂದರೆಯನ್ನು ತಪ್ಪಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕಾಡಾನೆಗಳ ಹಾವಳಿಯಿಂದ ಈಗಾಗಲೇ ಬೈರಾಪುರ, ಹೇರಿಕೆ, ಸತ್ತಿಗನಹಳ್ಳಿ, ಊರುಬಗೆ, ಕುಂಬರಡಿ, ಮೇಕನಗದ್ದೆ, ಹೊನ್ನೆಕೂಲು ಮುಂತಾದ ಗ್ರಾಮಗಳಲ್ಲಿ ಸಾವಿರಾರು ಹೆಕ್ಟೇರ್ ಗದ್ದೆ ತೋಟವನ್ನು ಪಾಳು ಬಿಟ್ಟು ಜೀವನೋಪಾಯಕ್ಕಾಗಿ ಪರದಾಡುವಂತಾಗಿದೆ.
ಇಲ್ಲಿನ ಜನರ ಮೂಲ ಕಸುಬು ಕೃಷಿ. ಭತ್ತ ಬೆಳೆದು ಬರುವ ಆದಾಯ ನಂಬಿಕೊಂಡಿದ್ದಾರೆ. ಕಾಡಾನೆಗಳು ನಾಶಪಡಿಸಿ ಸಂಕಷ್ಟ ತಂದೊಡ್ಡಿವೆ. ಇವುಗಳ ಹಾವಳಿಯಿಂದ ತಪ್ಪಿಸಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.




