ಚಿಕ್ಕಮಗಳೂರು

ಚಾರ್ಮಾಡಿ ಕಣಿವೆಯ ಜಲಪಾತದಲ್ಲಿ ಕೊಚ್ಚಿಹೋದ ಡ್ರೋನ್ ಕ್ಯಾಮರಾ!

ಚಿಕ್ಕಮಗಳೂರು: ಚಾರ್ಮಾಡಿ ಕಣಿವೆಯ ಜಲಪಾತದಲ್ಲಿ ಸಿಲುಕಿ ದುಬಾರಿ ಬೆಲೆಯ ಡ್ರೋನ್ ಕ್ಯಾಮರಾವೊಂದು ನೀರುಪಾಲಾಗಿದೆ.

ಇಲ್ಲಿನ ಮನಮೋಹಕ ಸ್ಥಳ, ಜಲಪಾತದ ದೃಶ್ಯಗಳನ್ನು ಸೆರೆಹಿಡಿಯಲು ಹಾಸನ ಮೂಲದ ಡ್ರೋನ್ ಕ್ಯಾಮರಾ ಹೊಂದಿರುವ ವ್ಯಕ್ತಿಯೊಬ್ಬರನ್ನು ಪತ್ರಕರ್ತರೊಬ್ಬರು ಕರೆದೊಯ್ದಿದ್ದರು. ಅಲೇಖಾನ್ ಜಲಪಾತದ ಬಳಿ ಧುಮ್ಮಿಕ್ಕುತ್ತಿದ್ದ ಜಲಧಾರೆಯ ದೃಶ್ಯವನ್ನು ಸೆರೆಹಿಡಿಯಲು ಹಾರಿಸಿದ್ದ ಕ್ಯಾಮರಾ ಆಕಸ್ಮಿಕವಾಗಿ ನೀರನ್ನು ಸ್ಪರ್ಶಿಸಿ ಆಯತಪ್ಪಿ ನೀರಿಗೆ ಬಿದ್ದಿದೆ.

ತಕ್ಷಣ ಇಳಿದು ಶೋಧಿಸಿದರೂ ಸಿಗಲಿಲ್ಲ. ಬಳಿಕ ಸಕ್ರಿಯ ಸೇವಾ ಸಂಸ್ಥೆಯ ಫಿಶ್ ಮೋಣು, ಆರಿಫ್ ಸ್ಥಳಕ್ಕಾಗಮಿಸಿ ಶೋಧ ನಡೆಸಿದ್ದಾರೆ. ನೀರಿನ ರಭಸಕ್ಕೆ ಕೊಚ್ಚಿ ಹೋಗಿರುವ ಕ್ಯಾಮರ ಸದ್ಯ ಪತ್ತೆಯಾಗಿಲ್ಲ. ಕಳೆದುಹೋದ ಡ್ರೋನ್ ಕ್ಯಾಮರ ರೂ. 3.50 ಲಕ್ಷ ಬೆಲೆಯದ್ದಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button