ಬಾಗಲಕೋಟೆ

ಬಿಜೆಪಿ ಜನ ಸ್ವರಾಜ್ ಸಮಾವೇಶ ಹಿನ್ನೆಲೆ; ಬೂಟ್ ಪಾಲಿಷ್​ಗೆ ಮುಂದಾಗಿದ್ದ ಕರವೇ ಜಿಲ್ಲಾಧ್ಯಕ್ಷ ಬಂಧನ

ಬಾಗಲಕೋಟೆ: ಬಾಗಲಕೋಟೆಯಲ್ಲಿ ಬಿಜೆಪಿ ಜನ ಸ್ವರಾಜ್ ಸಮಾವೇಶ ಹಿನ್ನೆಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜ್ ಸ್ಥಾಪನೆಗೆ ಆಗ್ರಹಿಸಿ ಬಿ ಎಸ್ ಯಡಿಯೂರಪ್ಪ ಸೇರಿದಂತೆ ನಾಯಕರ ಬೂಟ್ ಪಾಲಿಷ್ ಮಾಡಲು ಮುಂದಾಗಿದ್ದ ಕರವೇ ಜಿಲ್ಲಾಧ್ಯಕ್ಷ ರಮೇಶ್ ಬದ್ನೂರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಬಾಗಲಕೋಟೆ ತೆಗ್ಗಿ ಲೇಔಟ್ ನಲ್ಲಿರುವ ಮನೆಯ ಬಳಿ ಪೊಲೀಸರು ಕರವೇ ಜಿಲ್ಲಾಧ್ಯಕ್ಷ ರಮೇಶ್ ಬದ್ನೂರ್ ಬಂಧಿಸಿದ್ದಾರೆ. ಬಾಗಲಕೋಟೆಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗಾಗಿ ಕರವೇ ಕಾರ್ಯಕರ್ತರಿಂದ ಬೂಟ್ ಪಾಲಿಷ್ ಅಭಿಯಾನ ಕೈಗೊಂಡಿದ್ದರು.

ಹೋರಾಟ ಹತ್ತಿಕ್ಕಲು ಮುಂದಾದ ಶಾಸಕರು, ಪೊಲೀಸರ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಿದರು.ಕಾಲೇಜು ಸ್ಥಾಪನೆಯಾಗಿರುವವರೆಗೂ ಹೋರಾಟ ಮುಂದುವರೆಯಲಿದೆ.ಬೂಟ್ ಪಾಲಿಷ್ ಅಭಿಯಾನ ವ್ಯಂಗ್ಯವಾಡಿದ್ದ ಶಾಸಕ ವೀರಣ್ಣ ಚರಂತಿಮಠರ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು. ನಮ್ಮ ಹೋರಾಟ ಮೆಡಿಕಲ್ ಕಾಲೇಜಿಗೆ ಅಡಿಗಲ್ಲು ಹಾಕುವವರೆಗೆ ನಡೆಯಲಿದೆ ಎಂದರು.

ಬಾಗಲಕೋಟೆ ನಗರದ ಚರಂತಿಮಠ ಶಿವಾನುಭವ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಜನ ಸ್ವರಾಜ್ ಸಮಾವೇಶ ಹಮ್ಮಿಕೊಂಡಿದ್ದು.ಬಿಜೆಪಿಯ ಘಟಾನುಘಟಿ ನಾಯಕರು ಭಾಗಿಯಾಗಲಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button