ಚಿಕ್ಕಮಗಳೂರು
ಎಸ್ಸೆಸ್ಸೆಲ್ಲಿ; ಶೇ.100 ಅಂಕ ಗಳಿಸಿದ ಏಳು ವಿದ್ಯಾರ್ಥಿಗಳು

ಚಿಕ್ಕಮಗಳೂರು: ಎಸ್ಸೆಸ್ಸೆಲ್ಸಿ ಫಲಿತಾಂಶ ಇಂದು ಪ್ರಕಟವಾಗಿದ್ದು, ಜಿಲ್ಲೆಯ ಏಳು ವಿದ್ಯಾರ್ಥಿಗಳು 625ಕ್ಕೆ 625 ಅಂಕ ಗಳಿಸಿ, ಶೇ.100 ಫಲಿತಾಂಶ ಪಡೆದವರಾಗಿದ್ದಾರೆ.
ಉಂಡೇದಾಸರಹಳ್ಳಿಯ ಸೇಂಟ್ ಮೇರಿ ಶಾಲೆಯ ಎಸ್.ತೇಜಶ್ರೀ, ಗಣ್ಯ, ಜ್ಯೋತಿನಗರದ ಸೇಂಟ್ ಜೋಸೆಫ್ ಶಾಲೆಯ ಎಚ್.ಎಂ ಹರ್ಷಿತಾ, ಕಡಬಗೆರೆಯ ಜ್ಯೋತಿರ್ವಿಕಾಸ್ ಶಾಲೆಯ ಎನ್.ಆರ್.ರಂಜಿತಾ, ಕಳಸ ತಾಲೂಕಿನ ಶ್ರೀಜಗದೀಶ್ವರ ಶಾಲೆಯ ಕೆ.ವಿ.ಆದ್ಯ, ಡಿ.ಎ ಪವನ್ ಶೆಣೈ ಹಾಗೂ ಕೊಪ್ಪ ತಾಲೂಕಿನ ಹುಲುಮಕ್ಕಿಯ ಶ್ರೀವೆಂಕಟೇಶ್ವರ ವಿದ್ಯಾಮಂದಿರ ಆಂಗ್ಲ ಮಾಧ್ಯಮ ಶಾಲೆಯ ಪಿ.ಮಾನ್ಯಶ್ರೀ ಈ ಸಾಧನೆ ಮಾಡಿದ್ದಾರೆ.




