ಕಾಂಗ್ರೆಸ್ ನಾಯಕರ ಭ್ರಷ್ಟಾಚಾರ ಮಾತುಗಳು ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಧಾರವಾಡ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ನಾಯಕರ ಬಿಜೆಪಿ ವಿರುದ್ಧ ಭ್ರಷ್ಟಾಚಾರ ಆರೋಪ ಮಾತುಗಳು ನೋಡಿದ್ದರೆ, ಬೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ ಆಗುತ್ತದೆ ಎಂದು ಕಾಂಗ್ರೆಸ್ ನಾಯಕರಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತೀರುಗೇಟು ನೀಡಿದರು.
ಹು-ಧಾ ಮಾಹಾನಗರ ಪಾಲಿಕೆಯ ಚುನಾವಣೆಯ ಬಿಜೆಪಿ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದ ನಂತರ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರೈಲು ಬಿಡುವುದು ಕಾಂಗ್ರೆಸ್ ಪಕ್ಷದ ಸ್ವಭಾವವಾಗಿದೆ. ಈ ಹಿಂದೆ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನ್ಯಾಯ ಶೀರ್ಷಿಕೆಯಡಿ ಪ್ರಣಾಳಿಕೆ ಬೀಡುಗಡೆ ಮಾಡಿದ್ದರು. ಅದರಲ್ಲಿ ಪ್ರಮುಖವಾಗಿ ವರ್ಷಕ್ಕೆ ಬಡವರಿಗೆ 72 ಸಾವಿರ ನೀಡುವುದಾಗಿ ಹೇಳಿದ್ದರು, ಅದನ್ನು ಅಂದ ಜನರು ನಂಬಲಿಲ್ಲ. ಅಲ್ಲದೆ ಅಂದು ಲೋಕಸಭಾ ಚುನಾವಣೆಯಲ್ಲಿ ಬಹುಮತವನ್ನು ಪಡೆಯಲಿಲ್ಲ. ರಾಹುಲ್ ಗಾಂಧಿ ಹೇಗೆ ಮಾತನಾಡುತ್ತಾರೆ ಅದೇ ರೀತಿ ಈಗ ಡಿಕೆಶಿಯವರು ಮಾತಾಡುತ್ತಾರೆ. ಹಾಗಾಗಿ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಸಿಗುವುದಿಲ್ಲ ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ ಪಕ್ಷ ಈ ಹಿಂದೆ ದಶಕಗಳ ಕಾಲ ಅಧಿಕಾರದಲ್ಲಿದ್ದು, ಅವಳಿನಗರಕ್ಕೆ ಚತುಷ್ಪಥ ರಸ್ತೆ ನಿರ್ಮಿಸಲು ಆಗಲಿಲ್ಲ. ಅದನ್ನು ಮಾಡುವುದಕ್ಕೆ ಪ್ರಾರಂಭಿಸಿದ್ದು, ಬಿಜೆಪಿ ಪಕ್ಷವಾಗಿದೆ. ಶೆಟ್ಟರ, ಹಾಗೂ ಬಿಎಸ್‌ವೈ ಸಿಎಂ ಆಗಿದ್ದ ಕಾಲದಲ್ಲಿ ಅವಳಿನಗರ ಚತುಷ್ಪಥ ರಸ್ತೆ ನಿರ್ಮಮಾಣ ಆರಂಭಿಸಲಾಯಿತು. ಬಳಿಕ ಅದರ ನಡುವೆ ಬಿಆರ್‌ಟಿಎಸ್ ಸೇರಿ ಕೊಂಡ ಮತ್ತು. ಅದೂ ಕೂಡಾ ಈಗ ಒಳ್ಳೆಯದೇ ಆಗಿದೆ.
ಆಕಾಶದಲ್ಲಿರೋ ಚಂದ್ರನ ತೋರಿಸುತ್ತಿದ್ದಾರೆ:
ಪಾಲಿಕೆ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದ್ರೆ, ನಾವು ಎನ್ನು ಮಾಡುತ್ತೆವೆ ಎಂಬುವುದರ ಬಗ್ಗೆ ಈಗಾಗಲೇ ಪ್ರಣಾಳಿಕೆಯಲ್ಲಿ ಸ್ಪಷ್ಟವಾಗಿ ಹೇಳಿದ್ದೇವೆ. ಆದರೆ ಕಾಂಗ್ರೆಸ್ ಆಕಾಶದಲ್ಲಿರುವ ಚಂದ್ರನ ನೀಡುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ ಅವರು ಪಾಲಿಕೆ ಚುನಾವಣೆಯಲ್ಲಿ ಅವರಿಗೆ ಬಹುಮತ ಸಿಗುವುದಿಲ್ಲ, ಅಧಿಕಾರಕ್ಕೂ ಅವರು ಬರುವುದಿಲ್ಲ. ಈ ಹಿಂದೆ ಬಡವರಿಗೆ 72ಸಾವಿರ ನೀಡುತ್ತೇವೆ ಎಂದು ಹೇಳಿ ಹೆರಗೆ ಅಧಿಕಾರಕ್ಕೆ ಬರಲಿಲ್ವೋ ಅದೇ ಇದಕ್ಕೆ ಸಾಕ್ಷಿಯಾಗಿದೆ ಎಂದು ವ್ಯಗ್ಯವಾಡಿದರು.
ಜನತೆಗೆ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಸ್ವಚ್ಚತೆ ಸೇರಿದಂತೆ ಉತ್ತಮವಾದ ರಸ್ತೆಗಳನ್ನು ನೀಡುವುದು ಮಹಾನ್ರ ಪಾಲಿಕೆ ಮುಖ್ಯ ಕರ್ತವ್ಯಗಳಾಗಿರುತ್ತವೆ. ಆಸ್ತಿ ತೆರೆಗೆ ಹೆಚ್ಚಿಸುವುದು ಕಡಿಮೆ ಮಾಡುವುದು ಆಯಾ ಸಂದರ್ಭಕ್ಕೆ ತಕ್ಕಂತೆ ನಿರ್ಧಾರ ಕೈಗೊಳ್ಳಲಾಗುತ್ತದೆ. ಆದರೆ ಈ ಹಿಂದೆ ಆಸ್ತಿ ತೆರೆಗೆಯನ್ನು ಇವರು ಅಧಿಕಾರಾವಧಿಯಲ್ಲಿ ಎಷ್ಟು ಬಾರಿ ಹೆಚ್ಚಿಸಿದ್ದಾರೆ ಎಂಬುವುದರ ಕುರಿತು ಡಿಕೆಸಿಅವರು ಬಮವಿವರಣೆ ನೀಡಲಿ, ಆಗ ಅದರಲ್ಕಿಯೇ ಎಲ್ಲ ಉತ್ತರ ಸಿಗುತ್ತವೆ ಎಂದು ತೀರುಗೇಟು ನೀಡಿದರು.
ಸಂಹಿತೆ ಮುಗಿದ ಕೂಡಲೇ ಗುಂಡಿ ಮುಚ್ಚಲಾಗುವುದು:
ಈ ಹಿಂದೆ ಸುರಿದ ನಿರಂತರ ಮಳೆಯಿಂದಾಗಿ ಅವಳಿನಗರದ ಹಲವು ರಸ್ತೆಗಳಲ್ಲಿ ಗುಂಡುಗಳು ಬಿದ್ದೀರುವುದು ನೀಜ. ಅವುಗಳನ್ನು ಪಾಲಿಕೆ ಚುನಾವಣೆಯ ನೀತಿ ಸಂಹಿತೆ ಮುಗಿದ ತಕ್ಷಣ ಗುಂಡಿ ಮುಚ್ಚವ ಕೆಲಸ ಮಾಡಲಾಗುತ್ತದೆ. ಆದರೆ ಬಹುತೇಕ ಮುಖ್ಯರಸ್ತೆಗಳು ಉತ್ತಮವಾಗಿ ಸಿಸಿ ರಸ್ತೆಗಳು ನಿರ್ಮಾಣವಾಗಿವೆ. ಇನ್ನೂ ಕೆಕವು ಕಡೆಗಳಲ್ಲಿ ಅಂತಿಮ ಹಂತದ ಕೆಲವು ವರ್ಕ್ ಬ್ಯಲೆನ್ಸ್ ಇದೆ ಅದೂ ಕೂಡಾ ಸದ್ಯದಲ್ಲಿಯೇ ಪೂರ್ಣವಾಗುತ್ತವೆ. ಹು-ಧಾ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ 60 ಸ್ಥಾನಕ್ಕೇ ಹೆಚ್ಚು ಸ್ಥಾನವನ್ನು ಗೆಲ್ಲುತ್ತದೆ, ಆ ಮೂಲಕ ಮತ್ತೊಮ್ಮೆ ಪಾಲಿಕೆಯ ಅಧಿಕಾರವನ್ನು ಬಿಜೆಪಿ ಹಿಡಿಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
