ಜಿಲ್ಲಾ ಸುದ್ದಿಮೈಸೂರು

ಮತಾಂತರಕ್ಕೆ ಒಪ್ಪದ ಅಣ್ಣನ ಕುಟುಂಬದ ಮೇಲೆ ತಮ್ಮನಿಂದ ಹಲ್ಲೆ

ಮೈಸೂರು : ಸ್ವಂತ ತಮ್ಮನೇ ಅಣ್ಣನ ಕುಟುಂಬದವರನ್ನು ಬೇರೆ ಮತಕ್ಕೆ ಮತಾಂತರವಾಗುವಂತೆ ಒತ್ತಾಯಿಸಿದ್ದಲ್ಲದೇ ಇದಕ್ಕೆ ಒಪ್ಪದಿದ್ದಾಗ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಹೆಚ್.ಡಿ.ಕೋಟೆ ತಾಲೂಕಿನ ಟೈಗರ್ ಬ್ಲಾಕ್‌ನಲ್ಲಿ‌ ಈ ಘಟನೆ ನಡೆದಿದ್ದು, ಹಲ್ಲೆಗೊಳಗಾದ ಯದುನಂದನ್ ಕುಟುಂಬದವರು ಮೈಸೂರಿನ ಪತ್ರಕರ್ತರ ಭವನದಲ್ಲಿ ತಮ್ಮ ಮೇಲೆ ನಡೆದ ಹಲ್ಲೆಯ ಬಗ್ಗೆ ಕಣ್ಣೀರು ಸುರಿಸಿ ಘಟನೆಯನ್ನು ವಿವರಿಸಿದರು.

ಯಧುನಂದನ್ ಟೈಗರ್ ಬ್ಲಾಕ್ ನಿವಾಸಿಯಾಗಿದ್ದು, ಈತನ ತಮ್ಮ ಮನೋಹರ್ 20 ವರ್ಷಗಳ ಹಿಂದೆ ಬೇರೆ ಧರ್ಮಕ್ಕೆ ಮತಾಂತರಗೊಂಡು ಬೇರೆ ಊರಿಗೆ ಹೋಗಿ ನೆಲೆಸಿದ್ದಾನಂತೆ. ಕಳೆದ 7 ವರ್ಷಗಳ ಹಿಂದೆ ಆತ ಪುನಃ ಟೈಗರ್ ಬ್ಲಾಕ್‌ಗೆ ಬಂದು‌ ವಾಸವಿದ್ದನು.

ಆ ಸಂದರ್ಭದಲ್ಲಿ ಆತ ಯದುನಂದನ್ ಹಾಗೂ ಆತನ ಕುಟುಂಬದವರನ್ನು ಬೇರೆ ಮತಕ್ಕೆ ಮತಾಂತರವಾಗುವಂತೆ ಪ್ರೇರೇಪಿಸುತ್ತಿದ್ದು, ಹಲ್ಲೆ ನಡೆಸಿದ್ದಾನಂತೆ. ಡಿಸೆಂಬರ್ 31 ರಂದು ತಮ್ಮ ಮನೋಹರ ಇತರ 7 ಜನರ ಜೊತೆ ಬಂದು ನನ್ನ ಹಾಗೂ ನನ್ನ ಹೆಂಡತಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಜೊತೆಗೆ ನನ್ನ ಮೇಲೆ ದೂರು ದಾಖಲಿಸಿದ್ದಾನೆ ಎಂದು ಯದುನಂದನ್ ಆರೋಪಿಸಿದ್ದಾರೆ. ಘಟನೆ ಸಂಭಂದ ಹೆಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

Related Articles

Leave a Reply

Your email address will not be published. Required fields are marked *

Back to top button