ಜಿಲ್ಲಾ ಸುದ್ದಿರಾಜಕೀಯಹುಬ್ಬಳ್ಳಿ - ಧಾರವಾಡ

ಹು-ಧಾ ಪಾಲಿಕೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ: ಜಗದೀಶ್ ಶೆಟ್ಟರ್

ಧಾರವಾಡ : ಹುಬ್ಬಳ್ಳಿ – ಧಾರವಾಡ ಅವಳಿನಗರದಲ್ಲಿ ಬಿಜೆಪಿ ಪಕ್ಷದ ಅಭಿವೃದ್ಧಿ ಕಾರ್ಯಕ್ಕೆ ಜನತೆ ಸ್ಪಂದನೆ ಮಾಡಿದ್ದಾರೆ. ಈ ಹಿಂದೆ ಸತತವಾಗಿ ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಆಡಳಿತ ನಡೆಸಿದೆ. ಈಗ ಮೂರನೇ ಬಾರಿಯೂ ಸ್ಪಷ್ಟ ಬಹುಮತದೊಂದಿಗೆ ಅವಳಿನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್​ ವಿಶ್ವಾಸ ವ್ಯಕ್ತಪಡಿಸಿದರು.

ಧಾರವಾಡ ಕೃಷಿ ವಿಶ್ವ ವಿದ್ಯಾಲಯದ ಬಳಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈ ಹಿಂದೆಯೂ ನಾವು ಅವಳಿನಗರ ಪಾಲಿಕೆಯಲ್ಲಿ ಅಧಿಕಾರಕ್ಕೆ ಬರುತ್ತೆವೆ ಎಂದು ಹೇಳಿದ್ದೇವೆ. ಇಂದು ಅದರ ಫಲಿತಾಂಶ ಕೂಡಾ ಬರುತ್ತಿದೆ ಎಂದರು.

ಈಗಾಗಲೇ ನಮ್ಮ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸುತ್ತಿದ್ದಾರೆ. ಹಾಗಾಗಿ ಮೂರನೇ ಬಾರಿ ನಮ್ಮ ಬಿಜೆಪಿ ಪಕ್ಷ ಪಾಲಿಕೆಯಲ್ಲಿ ಕ್ಲಿಯರ್ ಮೇಜಾರಿಟಿಯೊಂದಿಗೆ ಅಧಿಕಾರಕ್ಕೆ ಬರುತ್ತೆ. ಇನ್ನೂ ಮತ ಏಣಿಕೆ ನಡೆಯುತ್ತಿದೆ, ಅಂತಿಮ ಫಲಿತಾಂಶ ಬಂದಾಗ 50 ಕ್ಕೂ ಹೆಚ್ಚು ಸ್ಥಾನ ನಾವು ಗೆಲುವ ವಿಶ್ವಾಸವಿದೆ ಎಂದು ತಿಳಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button