ಜಿಲ್ಲಾ ಸುದ್ದಿಬಾಗಲಕೋಟೆ
ಬಾಗಲಕೋಟೆ: 6 ರಿಂದ 8ನೇ ತರಗತಿ ಆರಂಭ: ಖುಷಿಯಿಂದ ಶಾಲೆಗೆ ಬಂದ ವಿದ್ಯಾರ್ಥಿಗಳು

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯಲ್ಲೂ ಇಂದಿನಿಂದ 6, 7 ಮತ್ತು 8ನೇ ತರಗತಿಗಳು ಒಂದುವರೆ ವರ್ಷದ ಬಳಿಕ ಆರಂಭವಾಗಿವೆ.
ತರಗತಿ ಕೊಠಡಿಯೊಳಗೆ ವಿದ್ಯಾರ್ಥಿಗಳನ್ನು ಬಿಡುವ ಮೊದಲು ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸ್ ಮಾಡಲಾಯಿತು.ಬಾಗಲಕೋಟೆಯಲ್ಲಿ ಖುಷಿಯಿಂದ ವಿದ್ಯಾರ್ಥಿಗಳು ಶಾಲೆಗೆ ಆಗಮಿಸಿದ್ದಾರೆ. ಶಾಲಾ ಶಿಕ್ಷಕರಿಂದ ಮಕ್ಕಳಿಗೆ ಥರ್ಮಲ್ ಸ್ಕ್ಯಾನಿಂಗ್ ಹಾಗೂ ಸ್ಯಾನಿಟೈಸ್ ಮಾಡಲಾಗಿದೆ.
ಬಾಗಲಕೋಟೆ ಜಿಲ್ಲೆಯಲ್ಲಿ 1,15, 000 ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದು. ಆರನೇ ತರಗತಿಯ 39559, ಏಳನೇ ತರಗತಿಯ 39260 ಹಾಗೂ ಎಂಟನೇ ತರಗತಿಯಲ್ಲಿ ಇದಾರೆ 36410 ವಿದ್ಯಾರ್ಥಿಗಳು. ಜಿಲ್ಲೆಯಲ್ಲಿ ಒಟ್ಟು 1500 ಶಾಲೆಗಳು ಆರಂಭವಾಗಿವೆ.
ಕೋವಿಡ್ ಮೂರನೆ ಅಲೆ ಹಿನ್ನೆಲೆಯಲ್ಲಿ ಪಾಸಿಟಿವಿಟಿ ದರ ಕಡಿಮೆ ಇರುವ ಜಿಲ್ಲೆಯಲ್ಲಿ ಹಂತ ಹಂತವಾಗಿ ಶಾಲೆಗಳನ್ನು ತೆರೆಯಲು ಸರ್ಕಾರ ನಿರ್ಧರಿಸಿದ್ದು, ಇದೀಗ 6 ರಿಂದ 8 ನೇ ತರಗತಿ ಆರಂಭವಾಗಿದ್ದು, ವಿದ್ಯಾರ್ಥಿಗಳು, ಶಿಕ್ಷಕರಲ್ಲಿ ಸಂತಸ ಮನೆ ಮಾಡಿದೆ.




